ಓದುವ ಅದಮ್ಯ ಆಸೆಯಿದ್ದರೂ ಹೊಟ್ಟೆಪಾಡಿಗಾಗಿ ಚಿಂದಿ ಆಯುತ್ತಿರುವ ರಾಯಚೂರು ಪೋರನಿಗೆ ಸರ್ಕಾರದ ನೆರವು ಸಿಕ್ಕೀತೇ?
ಜೀತಪದ್ಧತಿ, ಬಾಲ ಕಾರ್ಮಿಕ ಪಿಡುಗು ಯಾವತ್ತೋ ಕೊನೆಗಾಣಿಸಿದ್ದೇವೆ ಅಂತ ಬಡಾಯಿ ಕೊಚ್ಚಿಕೊಳ್ಳುವ ನಮ್ಮ ಸರ್ಕಾರಗಳು ಸಂತೋಷ್ ಕತೆಯನ್ನು ಕೇಳಬೇಕು. ಅವನಿಗೆ ಓದುವ ಅಸೆಯಿದೆ, ನಮ್ಮ ಶಿಕ್ಷಣ ಮಂತ್ರಿಗಳು ಹೇರ್ ಕಟ್ ಬಗ್ಗೆ ಮಾತಾಡುತ್ತಾ ಕಾಲಹರಣ ಮಾಡುವ ಬದಲು ಸಂತೋಷ್ ಓದಿಗೆ ನೆರವಾದರೆ ಚೆನ್ನಾಗಿರುತ್ತದೆ.
ರಾಯಚೂರು: ರಾಷ್ಡ್ರಪ್ರೇಮ, ದೇಶಭಕ್ತಿ (patriotism) ಬಗ್ಗೆ ಹಗಲಿಡೀ ಭಾಷಣಗಳನ್ನು ಬಿಗಿಯುವ ನಮ್ಮ ರಾಜಕಾರಣಿಗಳು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೊಸರ್ಕಲ್ ಗ್ರಾಮದ (Mosarkal village) ಈ ಹುಡುಗನಿಂದ ರಾಷ್ಟ್ರಕ್ಕೆ ಗೌರವ ಸಲ್ಲಿಸುವ ಪಾಠ ಹೇಳಿಸಿಕೊಳ್ಳಬೇಕು. ತನ್ನೂರಲ್ಲಿ ಬೀದಿ ಬೀದಿ ಸುತ್ತುತ್ತಾ ಚಿಂದಿ ಆಯುವ ಸಂತೋಷ್ (Santosh) ಹೆಸರಿನ ಬಾಲಕ ತನ್ನಲ್ಲಿರುವ ರಾಷ್ಟ್ರಪ್ರೇಮ ಪ್ರದರ್ಶಿಸಲು ಮಾಡಿದ್ದೇನು ಗೊತ್ತಾ? ಶಾಲೆಯೊಂದರ ಬಳಿ ಇವನು ಚಿಂದಿ ಆಯುತ್ತಿದ್ದಾಗ ಶಾಲೆಯ ಮಕ್ಕಳು ರಾಷ್ಟ್ರಗೀತೆ ಹಾಡುವುದು ಕಿವಿಗೆ ಬಿದ್ದಿದೆ. ಕೂಡಲೇ ಸಂತೋಷ್ ತನ್ನ ಕೆಲಸ ಬಿಟ್ಟು ರಾಷ್ಟ್ರಗೀತೆ ಹಾಡೋದು ಮುಗಿಯುವರೆಗೆ ಸಾವಧಾನ್ ಸ್ಥಿತಿಯಲ್ಲಿ ನಿಂತುಕೊಂಡಿದ್ದಾನೆ. ನಮ್ಮ ರಾಯಚೂರು ವರದಿಗಾರ ಸಂತೋಷ್ ನೊಂದಿಗೆ ಮಾತಾಡಿದ್ದು, ಮನೆಯಲ್ಲಿ ಕಡು ಬಡತನದ ಕಾರಣ ಅವನು 5ನೇ ತರಗತಿಯವರೆಗೆ ಓದಿ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾನೆ. ತನ್ನ ತಾಯಿಗೆ ಆರ್ಥಿಕವಾಗಿ ನೆರವಾಗಲು ಹತ್ತೆನ್ನೆರಡು ವರ್ಷದ ಪೋರ ಓದುವ ಅದಮ್ಯ ಆಸೆ ಮನದಲ್ಲಿ ಹುದುಗಿದ್ದರೂ ಚಿಂದಿ ಆಯುತ್ತಾ ರಸ್ತೆಗಳಲ್ಲಿ ಅಲೆಯುತ್ತಿದ್ದಾನೆ. ಜೀತಪದ್ಧತಿ, ಬಾಲ ಕಾರ್ಮಿಕ ಪಿಡುಗು ಯಾವತ್ತೋ ಕೊನೆಗಾಣಿಸಿದ್ದೇವೆ ಅಂತ ಬಡಾಯಿ ಕೊಚ್ಚಿಕೊಳ್ಳುವ ನಮ್ಮ ಸರ್ಕಾರಗಳು ಸಂತೋಷ್ ಕತೆಯನ್ನು ಕೇಳಬೇಕು. ಅವನಿಗೆ ಓದುವ ಅಸೆಯಿದೆ, ನಮ್ಮ ಶಿಕ್ಷಣ ಮಂತ್ರಿಗಳು ಹೇರ್ ಕಟ್ ಬಗ್ಗೆ ಮಾತಾಡುತ್ತಾ ಕಾಲಹರಣ ಮಾಡುವ ಬದಲು ಸಂತೋಷ್ ಓದಿಗೆ ನೆರವಾದರೆ ಚೆನ್ನಾಗಿರುತ್ತದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮೈನವಿರೇಳುತ್ತದೆ ನಮ್ಮ ರಾಯಚೂರಿನ ಈ ಬಾಲಕನ ರಾಷ್ಟ್ರಭಕ್ತಿಯನ್ನು ನೋಡಿದರೆ! ವಿಡಿಯೋ ನೋಡಿ