ರಾಯಚೂರಿನಲ್ಲಿ ಹಗಲು ದರೋಡೆ: ಶಿಕ್ಷಕಿಯ ಮನೆಯಿಂದ 14 ಲಕ್ಷ ರೂ. ನಗದು, ಚಿನ್ನಾಭರಣ ಕಳವು

Updated on: Nov 29, 2025 | 9:17 AM

ರಾಯಚೂರಿನಲ್ಲಿ ಪತ್ರಕರ್ತರೊಬ್ಬರ ಮನೆಯಲ್ಲಿ ಹಗಲು ಹೊತ್ತಿನಲ್ಲಿ ದರೋಡೆ ನಡೆದಿದೆ. ಕಳ್ಳರು ಮನೆಯಿಂದ 14 ಲಕ್ಷ ರೂಪಾಯಿ ನಗದು, 9.5 ಗ್ರಾಂ ಚಿನ್ನ ಮತ್ತು 5 ಗ್ರಾಂ ಬೆಳ್ಳಿ ಆಭರಣಗಳನ್ನು ಕದ್ದೊಯ್ದಿದ್ದಾರೆ. ಮಕ್ಕಳ ಶುಲ್ಕ ಹಾಗೂ ಮನೆ ಖರ್ಚಿಗಾಗಿ ಇಟ್ಟಿದ್ದ ಹಣವನ್ನು ಕಳ್ಳರು ಲೂಟಿ ಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಲಾಗಿದೆ.

ರಾಯಚೂರು, ನ.29: ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ಪತ್ರಕರ್ತರೊಬ್ಬರ ಮನೆಯಲ್ಲಿ ಹಗಲು ಹೊತ್ತಿನಲ್ಲಿ ಕಳ್ಳತನ ನಡೆದಿದೆ. ಮನೆಯಿಂದ ಸುಮಾರು 14 ಲಕ್ಷ ರೂಪಾಯಿ ನಗದು, ಮಾಂಗಲ್ಯ ಸರ, ಕಿವಿಯೋಲೆ, ಉಂಗುರ, ಸೇರಿ ಒಟ್ಟು 95 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಆಭರಣ ಕಳ್ಳರು ಕದ್ದೊಯ್ದಿದ್ದಾರೆ. ಪತ್ರಕರ್ತ ಸಿದ್ಧನಗೌಡ ಹಾಗೂ ಅವರ ಪತ್ನಿ ನಾಗಮ್ಮ ಅವರು ಕೆಲಸಕ್ಕೆ ತೆರಳಿದ ವೇಳೆ ಸುಮಾರು ಬೆಳಗ್ಗೆ 7:30 ರಿಂದ ಸಂಜೆ 5:30ರ ನಡುವೆ ಈ ಘಟನೆ ನಡೆದಿದೆ. ಪತ್ರಕರ್ತ ಸಿದ್ಧನಗೌಡ ತಮ್ಮ ಪೂರ್ವಿಕರ ಆಸ್ತಿಯನ್ನು ಮಾರಾಟ ಮಾಡಿ ಬಂದಿದ್ದ ಹಣವನ್ನು ಮಕ್ಕಳ ಶಾಲಾ ಶುಲ್ಕ, ಮನೆ ಖರ್ಚು ಹಾಗೂ ಎಫ್.ಡಿ. ಮಾಡಲು ಮನೆಯಲ್ಲಿ ಇಟ್ಟಿದ್ದರು. ಅವರು ಮನೆಗೆ ವಾಪಸ್ ಬಂದಾಗ ಹಿಂಬಾಗಿಲು ಮುರಿದಿತ್ತು ಹಾಗೂ ಮನೆಯಲ್ಲಿದ್ದ ಲಾಕರ್‌ ಕೂಡ ಓಪನ್​​ ಆಗಿತ್ತು. ಕಳ್ಳರು ಹಣ, ಚಿನ್ನ, ಬೆಳ್ಳಿ ಮಾತ್ರವಲ್ಲದೆ ಆಸ್ತಿ ದಾಖಲಾತಿಗಳು ಮತ್ತು ಇತರೆ ಪ್ರಮುಖ ಪ್ರಮಾಣಪತ್ರಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮನೆಯವರು ನ್ಯಾಯಕ್ಕಾಗಿ ಪೊಲೀಸರಿಗೆ ಮನವಿ ಮಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Nov 29, 2025 09:13 AM
Follow Us
ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More