ಹೋಟೆಲ್, ರೆಸ್ಟೋರೆಂಟ್, ಬೇಕರಿಗಳ ಮೇಲೆ ಅಧಿಕಾರಿಗಳ ದಾಳಿ: 2-3 ದಿನದ ಹಳೆಯ ಮಾಂಸ, ಪನ್ನೀರ್ ಪತ್ತೆ
ರಾಯಚೂರಿನ ಹೋಟೆಲ್, ರೆಸ್ಟೋರೆಂಟ್, ಬೇಕರಿಗಳ ಮೇಲೆ ಆಹಾರ ಸುರಕ್ಷತಾ ಇಲಾಖೆ ದಾಳಿ ನಡೆಸಿ, ಕಳಪೆ ಹಾಗೂ ಕಲಬೆರಕೆ ಆಹಾರ ಪದಾರ್ಥಗಳನ್ನು ಪತ್ತೆ ಮಾಡಿದೆ. ಹಳೆಯ ಮಾಂಸ, ಪನ್ನೀರ್, ಅನೈರ್ಮಲ್ಯ ಮತ್ತು ಪರವಾನಗಿ ಇಲ್ಲದಿರುವುದು ಕಂಡುಬಂದಿದೆ. ಅಪಾಯಕಾರಿ ಸಿಲಿಂಡರ್‌ಗಳನ್ನು ಸಹ ಜಪ್ತಿ ಮಾಡಲಾಗಿದ್ದು, ನಿಯಮ ಉಲ್ಲಂಘಿಸಿದ 19 ಸಂಸ್ಥೆಗಳಿಗೆ 1.08 ಲಕ್ಷ ದಂಡ ವಿಧಿಸಿ, ಪಾಲಿಕೆ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಎಚ್ಚರದಿಂದಿರಲು ಸಲಹೆ.
ರಾಯಚೂರು, ಡಿ.25: ಕರ್ನಾಟಕದ ಅನೇಕ ಹೋಟೆಲ್ ರೆಸ್ಟೋರೆಂಟ್, ಬೇಕರಿ, ಬಾರ್ & ರೆಸ್ಟೋರೆಂಟ್ಗಳಲ್ಲಿ ಕಳಪೆ ಆಹಾರಗಳು ಪತ್ತೆಯಾಗಿದೆ. ಇದೀಗ ಹೋಟೆಲ್ ರೆಸ್ಟೋರೆಂಟ್, ಬೇಕರಿಗಳಲ್ಲಿ ಸಿಗುವ ವೆರೈಟಿ ಆಹಾರವನ್ನು ಸೇವನೆ ಮಾಡುವ ಮುನ್ನ ಎಚ್ಚರ ಇರಲಿ. ಅಲ್ಲಿ ಸಿಗುವ ಆಹಾರಗಳು ಎಷ್ಟು ಸೇಫ್ ಎನ್ನುವುದನ್ನು ಮೊದಲು ತಿಳಿದುಕೊಳ್ಳುವುದು ಒಳ್ಳೆಯದು. ಹೌದು ಇದೀಗ ರಾಯಚೂರಿನಲ್ಲಿ ನಾಲ್ಕು ಇಲಾಖೆ ಅಧಿಕಾರಿಗಳಿಂದ ಹೋಟೆಲ್ಗಳ ಮೇಲೆ ದಾಳಿ ಮಾಡಲಾಗಿದೆ. ಎರಡು-ಮೂರು ದಿನದ ಹಳೆಯ ಮಾಂಸ, ಪನ್ನೀರ್ ಫ್ರೀಜರ್ ಗಳಲ್ಲಿ ಪತ್ತೆಯಾಗಿದೆ. ಇದರ ಜತೆಗೆ ಕಲಬೆರಿಕೆ, ಸಂಶಯ ಹುಟ್ಟಿಸೋ ಆಹಾರ-ಪದಾರ್ಥ ಪತ್ತೆಯಾಗಿದೆ. ಇದನ್ನು ನೋಡಿದ ಅಧಿಕಾರಿಗಳು ಶಾಕ್ ಆಗಿದ್ದಾರೆ. ರಾಯಚೂರು ಮಹಾನಗರ ಪಾಲಿಕೆ, ಕಂದಾಯ ಇಲಾಖೆ,ಆಹಾರ ಸುರಕ್ಷತಾ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಂದ ಈ ದಾಳಿ ನಡೆಸಲಾಗಿದೆ. ಒಟ್ಟು 19 ಕಡೆ ದಾಳಿಯನ್ನು ನಡೆಸಿದ್ದಾರೆ. ಈ ವೇಳೆ ಈ ಹೋಟೆಲ್ ರೆಸ್ಟೋರಂಟ್, ಬೇಕರಿಗಳಿಗೆ ಆಹಾರ ಗುಣಮಟ್ಟ, ಶುಚಿತ್ವ, ಲೈಸೆನ್ಸ್ ಇಲ್ಲದಿರುವುದು ಗೊತ್ತಾಗಿದೆ. ಇನ್ನು ಕೆಲವು ಕಡೆ ಅಪಾಯಕಾರಿ ಎಂದು 27 ಗೃಹಪಯೋಗಿ ಸಿಲಿಂಡರ್ ಗಳು ಜಪ್ತಿ ಮಾಡಲಾಗಿದೆ. ಇನ್ನು ನಿಯಮ ಉಲ್ಲಂಘಿಸಿದ ವ್ಯಾಪಾರಸ್ಥರಿಗೆ ದಂಡ ವಿಧಿಸಿ,ನೋಟಿಸ್ ನೀಡಲಾಗಿದೆ.ಒಟ್ಟು 1 ಲಕ್ಷ 8 ಸಾವಿರ ದಂಡ ವಿಧಿಸಲಾಗಿದೆ. ನಿಯಮ ಉಲ್ಲಂಘಿಸಿರುವ ವ್ಯಾಪಾರಿಗಳಿಗೆ ಪಾಲಿಕೆ ಆಯುಕ್ತ ಜುಬಿನ್ ಮೋಹಾಪಾತ್ರ ಖಡಕ್ ಎಚ್ಚರಿಕೆ ಕೂಡ ನೀಡಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

