ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!

Edited By:

Updated on: Oct 04, 2026 | 7:56 PM

ಮುಖ್ಯಾಂಶಗಳು

  • ರಾಯಚೂರಿನಲ್ಲಿ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ
  • ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಸ್ಮಿತ್ ಫೋಟೋ ಪ್ರದರ್ಶನ
  • ಕೋ ಪೈಲಟ್​ನಿಂದ ಹಲ್ಲೆಗೊಳಗಾಗಿದ್ದರೂ ಸಾಹಸ ಪ್ರದರ್ಶಿಸಿದ್ದ ಸ್ಮಿತ್

ರಾಯಚೂರಿನಲ್ಲಿ ನಡೆದ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆಯು ವಿಶಿಷ್ಟ ಗೌರವಕ್ಕೆ ಸಾಕ್ಷಿಯಾಯಿತು. ದುಬೈನಿಂದ ಇಸ್ರೇಲ್‌ಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರನ್ನು ಪತನದಿಂದ ರಕ್ಷಿಸಿದ್ದ ಭಾರತದ ವೀರ ಪೈಲಟ್ ಸ್ಮಿತ್ ಮಚ್ಚರ್ ಅವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಿ ಸಾರ್ವಜನಿಕರು ಆಶೀರ್ವಾದ ಕೋರಿದರು. ಈ ಘಟನೆ ಅವರ ಪರಾಕ್ರಮಕ್ಕೆ ಸಂದ ಗೌರವವಾಗಿದೆ.

ರಾಯಚೂರು, ಅಕ್ಟೋಬರ್​ 04: ಫ್ಲೈ ದುಬೈ ವಿಮಾನದ ಹೈಜಾಕ್​ಗೆ ಯತ್ನ ಪ್ರಕರಣ ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿದೆ. ಫ್ಲೈ ದುಬೈ ವಿಮಾನದಲ್ಲಿ ಪೈಟಲ್ ಸ್ಮಿತ್ ಮಚ್ಚರ್ ಮೇಲೆ ಚಾಕುವಿನಿಂದ ಭೀಕರ ದಾಳಿ ಮಾಡಿ, ಕೋ ಪೈಲಟ್ ವಿಮಾನವನ್ನು ಹೈಜಾಕ್ ಮಾಡಲು ಯತ್ನಿಸಿದ್ದ. ತೀವ್ರ ರಕ್ತದ ಮಡುವಿನಲ್ಲಿದ್ದ ಸ್ಮಿತ್ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು, 180 ಜನರ ಜೀವ ಉಳಿಸಿದ್ದಾರೆ. ಆ ಮೂಲಕ ರಿಯಲ್​ ಹೀರೋ ಆಗಿದ್ದಾರೆ. ಸದ್ಯ ಈ ಭಾರತೀಯ ಪೈಟಲ್ ಸ್ಮಿತ್ ಮಚ್ಚರ್ ​ಕ್ರೇಜ್​ ಇತ್ತ ಕರ್ನಾಟಕದಲ್ಲೂ ಜೋರಾಗಿದೆ. ರಾಯಚೂರಿನ ಹಿಂದೂ ಮಹಾ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಸ್ಮಿತ್ ಮಚ್ಚರ್ ​ಫೋಟೋ ರಾರಾಜಿಸಿದೆ. ನಗರದ ಗಂಜ್ ಸರ್ಕಲ್​​ನಿಂದ ಚಂದ್ರಮೌಳೇಶ್ವರ್ ಸರ್ಕಲ್​ವರೆಗೆ ನಡೆದ ಮೆರವಣಿಗೆ ವೇಳೆ ‘ಗಣೇಶನ ಆಶೀರ್ವಾದ
ಸ್ಮಿತ್ ಮೇಲಿರಲಿ’ ಎಂದು ಬರೆದಿರುವ ಭಾವಚಿತ್ರವನ್ನು ಪ್ರದರ್ಶನ ಮಾಡಲಾಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Oct 04, 2026 07:55 PM
Loading...
Unable to load recommendations.
Follow Us
ಭೀಮೇಶ್​​ ಪೂಜಾರ್

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More