ನೀರಿನಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಲೈನ್ ಸರಿಪಡಿಸಿದ ಜೆಸ್ಕಾಂ ಸಿಬ್ಬಂದಿ; ವಿಡಿಯೋ ವೈರಲ್
ಮಸ್ಕಿ ಪಟ್ಟಣದಲ್ಲಿ ಜೀವ ಭಯ ತೊರೆದು ನೀರಿನಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಲೈನ್ ಸರಿಪಡಿಸಿದ ಜೆಸ್ಕಾಂ ಸಿಬ್ಬಂದಿಯ ಕಾರ್ಯಕ್ಷಮತೆಗೆ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ರಾಯಚೂರು: ಮಸ್ಕಿ ಪಟ್ಟಣದಲ್ಲಿ ಜೀವ ಭಯ ತೊರೆದು ನೀರಿನಲ್ಲಿ ಈಜಿಕೊಂಡು ಹೋಗಿ ವಿದ್ಯುತ್ ಲೈನ್ ಸರಿಪಡಿಸಿದ ಜೆಸ್ಕಾಂ ಸಿಬ್ಬಂದಿಯ ಕಾರ್ಯಕ್ಷಮತೆಗೆ ಜನರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ. ಕಳೆದ ಒಂದು ವಾರದ ಹಿಂದೆ ಸುರಿದಿದ್ದ ಮಳೆಯಿಂದಾಗಿ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಜಮೀನಿನಲ್ಲಿ ಐದಾರು ಅಡಿಯವರೆಗೂ ನೀರು ತುಂಬಿತ್ತು. ಈ ಮಧ್ ವಿದ್ಯುತ್ ಸಂಪರ್ಕ ಕಡಿತವಾದ ಹಿನ್ನೆಲೆ ಜಮೀನಿನಲ್ಲಿ ನಿಂತಿದ್ದ ನೀರಿನಲ್ಲೇ ಈಜಿಕೊಂಡು ಹೋದ ಲೈನ್ ಮ್ಯಾನ್, ಕಡಿತವಾಗಿದ್ದ ವಿದ್ಯುತ್ ಸಂಪರ್ಕವನ್ನು ಸರಿಪಡಿಸಿದ್ದಾರೆ. ಜೆಸ್ಕಾಂ ಸಿಬ್ಬಂದಿ ದುರಗಪ್ಪ ಹಾಗೂ ಶಾಂತೇಶ್ ಅವರಿಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸದ್ಯ ಇದರ ವಿಡಿಯೋ ವೈರಲ್ ಆಗುತ್ತಿದ್ದು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.
ಮತ್ತಷ್ಟು ವಿಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ