ಬಸ್ಲ್ಲಿ ಸಿಕ್ತು 2.5 ಲಕ್ಷ ರೂ ಹಣ: ಹಿಂದಿರುಗಿಸಿ ಪ್ರಾಮಾಣಿಕತೆ ಮೇರೆದ ಕೆಎಸ್ಆರ್ಟಿಸಿ ಸಿಬ್ಬಂದಿ
ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ಸೋಮಶೇಖರ್ ಎನ್ನುವವರು ಹುಬ್ಬಳ್ಳಿ-ಹೈದರಾಬಾದ್ ಬಸ್ನಲ್ಲಿ ಹಣದ ಬ್ಯಾಗ್ ಬಿಟ್ಟುಹೋಗಿದ್ದಾರೆ. 2.5 ಲಕ್ಷ ರೂ. ಇದ್ದ ಹಣದ ಬ್ಯಾಗ್ನ್ನು ಬಸ್ನಲ್ಲೇ ಬಿಟ್ಟು ಇಳಿದಿದ್ದರು. ಸದ್ಯ ಅಧಿಕಾರಿಗಳ ಸಮ್ಮುಖದಲ್ಲಿ ಸೋಮಶೇಖರ್ಗೆ ಹಸ್ತಾಂತರ ಮಾಡುವ ಮೂಲಕ ಕೆಎಸ್ಆರ್ಟಿಸಿ ನಿರ್ವಾಹಕ ಮತ್ತು ಚಾಲಕ ಹಿಂದಿರುಗಿಸುವ ಮೂಲಕ ಮಾನವೀಯತೆ ಮೇರೆದಿದ್ದಾರೆ.
ರಾಯಚೂರು, ಜೂನ್ 19: ಬಸ್ನಲ್ಲಿ ಬಿಟ್ಟು ಹೋಗಿದ್ದ 2.5 ಲಕ್ಷ ರೂ. ಹಣವನ್ನು (money) ಕೆಎಸ್ಆರ್ಟಿಸಿ (KSRTC) ನಿರ್ವಾಹಕ ಮತ್ತು ಚಾಲಕ ಹಿಂದಿರುಗಿಸುವ ಮೂಲಕ ಮಾನವೀಯತೆ ಮೇರೆದಿರುವಂತಹ ಘಟನೆ ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ ನಡೆದಿದೆ. ಸದ್ಯ ಕೆಎಸ್ಆರ್ಟಿಸಿ ಬಸ್ ಚಾಲಕ ಹನಮಂತ್ ಹಾಗೂ ಕಂಡಕ್ಟರ್ ಮಂಜುನಾಥ್ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ಮೂಲದ ಸೋಮಶೇಖರ್ ಎನ್ನುವವರು ಹುಬ್ಬಳ್ಳಿ-ಹೈದರಾಬಾದ್ ಬಸ್ನಲ್ಲಿ ಹಣದ ಬ್ಯಾಗ್ ಬಿಟ್ಟುಹೋಗಿದ್ದಾರೆ. ನಿನ್ನೆ ಮಧ್ಯಾಹ್ನ ಮಾನ್ವಿಯಿಂದ ಇದೇ ಬಸ್ನಲ್ಲಿ ರಾಯಚೂರಿಗೆ ಸೋಮಶೇಖರ್ ಆಗಮಿಸಿದ್ದರು. ಈ ವೇಳೆ 2.5 ಲಕ್ಷ ರೂ. ಇದ್ದ ಹಣದ ಬ್ಯಾಗ್ನ್ನು ಬಸ್ನಲ್ಲೇ ಬಿಟ್ಟು ಇಳಿದಿದ್ದಾರೆ. ಬಳಿಕ ಹೈದರಾಬಾದ್ನಲ್ಲಿ ಲಗೇಜ್ ಕ್ಯಾರಿಯರ್ನಲ್ಲಿ ಬ್ಯಾಗ್ ಪರಿಶೀಲನೆ ವೇಳೆ ಹಣ ಪತ್ತೆ ಹಿನ್ನೆಲೆ ಬ್ಯಾಗ್ನಲ್ಲಿದ್ದ ಬ್ಯಾಂಕ್ ಪಾಸ್ಬುಕ್ ತಪಾಸಣೆ ಮಾಡಲಾಗಿದೆ. ಆ ಬಳಿಕ ಅದರಲ್ಲಿದ್ದ ಫೋನ್ ನಂಬರ್ ಮೂಲಕ ಸೋಮಶೇಖರ್ಗೆ ಕರೆ ಮಾಡಲಾಗಿದೆ. ಇಂದು ಮರಳಿ ಹೈದರಾಬಾದ್ನಿಂದ ಆಗಮಿಸುವ ವೇಳೆ ರಾಯಚೂರಿನಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ಸೋಮಶೇಖರ್ಗೆ ಹಸ್ತಾಂತರ ಮಾಡಲಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.