ಚಿಕ್ಕಮಗಳೂರು: ಮಳೆ ರಭಸಕ್ಕೆ ರಸ್ತೆ ಕೊಚ್ಚಿಹೋಗಿ ಶೃಂಗೇರಿ-ಆಗುಂಬೆ ನಡುವಿನ ಸಂಪರ್ಕ ಕಟ್!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 15, 2022 | 12:11 PM

ಚಿಕ್ಕಮಗಳೂರಿನಲ್ಲಿ ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಶೃಂಗೇರಿ (Sringeri) ತಾಲ್ಲೂಕಿನ ನೇರಳೆಕೊಡಿ ಬಳಿ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಶೃಂಗೇರಿ-ಆಗುಂಬೆ ನಡುವಿನ ಸಂಪರ್ಕ ಕಟ್ ಆಗಿದೆ

ಚಿಕ್ಕಮಗಳೂರು:  ಈ ವಿಡಿಯೋ ನೋಡಿದರೆ ಭಯವಾಗುತ್ತದೆ ಮಾರಾಯ್ರೇ. ಈ ಬಾರಿಯ ಮಳೆ ಸೃಷ್ಟಿಸಿರುವ ಅವಾಂತರಗಳಲ್ಲಿ ಇದೂ ಒಂದು. ಚಿಕ್ಕಮಗಳೂರಿನಲ್ಲಿ (Chikmagalur) ಮಳೆ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ಶೃಂಗೇರಿ (Sringeri) ತಾಲ್ಲೂಕಿನ ನೇರಳೆಕೊಡಿ ಬಳಿ ರಸ್ತೆ ಕೊಚ್ಚಿಹೋಗಿದೆ. ಇದರಿಂದಾಗಿ ಶೃಂಗೇರಿ-ಆಗುಂಬೆ (Agumbe) ನಡುವಿನ ಸಂಪರ್ಕ ಕಟ್ ಆಗಿದೆ. ರಸ್ತೆ ಎಷ್ಟು ಅನಾಹುತಕಾರಿಯಾಗಿ ಕುಸಿದಿದೆ ಅನ್ನೋದನ್ನ ಗಮನಿಸಿ. ಆ ಸಮಯದಲ್ಲಿ ವಾಹನವೇನಾದರೂ ಅಲ್ಲಿಂದ ಚಲಿಸುತ್ತಿದ್ದರೆ ಅದು ಪ್ರಪಾತಕ್ಕೆ ಜಾರುತಿತ್ತು.