ದೇವನಹಳ್ಳಿ ವಿಮಾನ ನಿಲ್ದಾಣ ಸುತ್ತಮುತ್ತ ಮಳೆ, ಧಗೆಯಿಂದ ಬಿಡುಗಡೆ ಆಹ್ಲಾದಕರ ವಾತಾವರಣ!

|

Updated on: May 06, 2024 | 6:35 PM

ಮಳೆ ಸುರಿಯುತ್ತದೆ ಅಂತ ನಿರೀಕ್ಷಿಸಿರದ ಜನ ಅದರಲ್ಲೂ ಮಹಿಳೆಯರು ತಲೆ ಮೇಲೆ ದುಪ್ಪಟ್ಟಾ ಇಲ್ಲವೇ ಬೇರೆ ಬಟ್ಟೆಯನ್ನ ಹೊದ್ದು ಕಾರು ಪಾರ್ಕಿಂಗ್ ಕಡೆ ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಒಬ್ಬ ಹಿರಿಯ ನಾಗರಿಕರು ಮಳೆಯಲ್ಲೇ ಲಗ್ಗೇಜ್ ಟ್ರಾಲಿ ತಳ್ಳಿಕೊಂಡು ಬರುತ್ತಿರುವುದನ್ನು ಸಹ ವಿಡಿಯೋದಲ್ಲಿ ವೀಕ್ಷಿಸಬಹುದು.

ಬೆಂಗಳೂರು: ವಿದೇಶ ಮತ್ತು ಭಾರತದ ಬೇರೆ ನಗರಗಳಿಂದ ಇಂದು ಸಾಯಂಕಾಲ ಬೆಂಗಳೂರು (Bengaluru) ಆಗಮಿಸಿದವರನ್ನು ಮಳೆರಾಯ ಸ್ವಾಗತಿಸಿದ ಮಾರಾಯ್ರೇ. ಬೆಂಗಳೂರು ನಗರ ಭಾಗದಲ್ಲಿ (city area) ಮಧ್ಯಾಹ್ನ ಮೋಡ ಕವಿದ ವಾತಾವರಣ ಮತ್ತು ಕೊಂಚ ತಂಪು ಹವೆ ಬೀಸಿದಾಗಲೇ ಹತ್ತಿರದ ಪ್ರದೇಶದಲ್ಲಿ ಮಳೆಯಾಗುತ್ತಿರುವ ಬಗ್ಗೆ ಮುನ್ಸೂಚನೆ ಸಿಕ್ಕಿತ್ತು. ದೇವನಹಳ್ಳಿಯಲ್ಲಿರುವ ಕೆಂಪೇಗೌಡ ವಿಮಾನ ನಿಲ್ದಾಣದ (KIA Devanahalli) ಸುತ್ತಮುತ್ತಲಿನ ಪ್ರದೇಶದಲ್ಲಿ ಇವತ್ತು ಮಳೆಯಾಗಿದೆ. ಹೇಳಿಕೊಳ್ಳುವಂಥ ದೊಡ್ಡ ಮಳೆಯೇನೂ ಅಲ್ಲ ಆದರೆ ಕಡು ಬಿಸಿಲು ಮತ್ತು ಧಗೆಯಿಂದ ಕಂಗೆಟ್ಟಿದ್ದ ಜನರಲ್ಲಿ ಮಳೆ ಆಹ್ಲಾದವನ್ನುಂಟು ಮಾಡಿದೆ. ಮಳೆ ಸುರಿಯುತ್ತದೆ ಅಂತ ನಿರೀಕ್ಷಿಸಿರದ ಜನ ಅದರಲ್ಲೂ ಮಹಿಳೆಯರು ತಲೆ ಮೇಲೆ ದುಪ್ಪಟ್ಟಾ ಇಲ್ಲವೇ ಬೇರೆ ಬಟ್ಟೆಯನ್ನ ಹೊದ್ದು ಕಾರು ಪಾರ್ಕಿಂಗ್ ಕಡೆ ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಒಬ್ಬ ಹಿರಿಯ ನಾಗರಿಕರು ಮಳೆಯಲ್ಲೇ ಲಗ್ಗೇಜ್ ಟ್ರಾಲಿ ತಳ್ಳಿಕೊಂಡು ಬರುತ್ತಿರುವುದನ್ನು ಸಹ ವಿಡಿಯೋದಲ್ಲಿ ವೀಕ್ಷಿಸಬಹುದು. ಮಳೆ ನೀಡುವ ಆನಂದವೇ ಅಂಥದ್ದು ಸ್ವಾಮಿ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರು: ಶುಕ್ರವಾರ ಸುರಿದ ಮಳೆಯಿಂದ ಬೆಸ್ಕಾಂಗೆ 1.18 ಕೋಟಿ ರೂ. ನಷ್ಟ