ಕುಂಭದ್ರೋಣಕ್ಕೆ ತತ್ತರಿಸಿದ ಉತ್ತರ ಕರ್ನಾಟಕ, ಹಾವೇರಿಯಲ್ಲಿ ನೀರಲ್ಲಿ ಕೊಚ್ಚಿಹೋಗುತ್ತಿದ್ದ ಶಿಕ್ಷಕರೊಬ್ಬರ ರಕ್ಷಣೆ
ಹಾವೇರಿಯ ಹೆರೂರು ಗ್ರಾಮದಲ್ಲಿ ಉಕ್ಕಿ ಹರಿಯುತ್ತಿದ್ದ ಹಳ್ಳವೊಂದನ್ನು ದಾಟುವ ಪ್ರಯತ್ನ ಮಾಡಿದ ಶಿಕ್ಷಕರೊಬ್ಬರು ತನ್ನ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿತ್ತಿದ್ದಾಗ ಸಮಯಪ್ರಜ್ಞೆ ಮೆರೆದ ಸ್ಥಳೀಯರು ಅವರನ್ನು ಕಾಪಾಡಿದ್ದಾರೆ.
ಮಳೆರಾಯ ಇಡೀ ಕರ್ನಾಟಕವನ್ನೇ ಎಡೆಬಿಡದೆ ಕಾಡುತ್ತಿದ್ದಾನೆ. ಮಂಗಳವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ಉತ್ತರ ಕರ್ನಾಟಕ (North Karnataka) ತತ್ತರಿಸಿ ಹೋಗಿದೆ. ಮಳೆಯಿಂದಾಗಿ ಹಾವೇರಿ (Haveri), ರಾಯಚೂರು, ಕಲಬುರಗಿ ಮೊದಲಾದ ಜಿಲ್ಲೆಗಳಲ್ಲಿನ ಹಳ್ಳಕೊಳ್ಳಗಳು (water bodies) ಉಕ್ಕಿ ಹರಿಯುತ್ತಿವೆ, ಹೊಲಗದ್ದೆಗಳು ಜಲಾವೃತಗೊಂಡು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಹಾವೇರಿಯ ಹೆರೂರು ಗ್ರಾಮದಲ್ಲಿ ಉಕ್ಕಿ ಹರಿಯುತ್ತಿದ್ದ ಹಳ್ಳವೊಂದನ್ನು ದಾಟುವ ಪ್ರಯತ್ನ ಮಾಡಿದ ಶಿಕ್ಷಕರೊಬ್ಬರು ತನ್ನ ಬೈಕ್ ಸಮೇತ ಕೊಚ್ಚಿಕೊಂಡು ಹೋಗಿತ್ತಿದ್ದಾಗ ಸಮಯಪ್ರಜ್ಞೆ ಮೆರೆದ ಸ್ಥಳೀಯರು ಅವರನ್ನು ಕಾಪಾಡಿದ್ದಾರೆ.