Monsoon 2023: ಮಂಗಳವಾರವೂ ಬೆಂಗಳೂರಲ್ಲಿ ಮಳೆ, ಮಳೆಗಾಲ ದೂರವಿಲ್ಲ, ಹೊಸ ಸರ್ಕಾರ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಯೋಚಿಸಿದೆಯೇ?
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಿನ್ನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಯೋನ್ಮುಖರಾಗುವಂತೆ ತಾಕೀತು ಮಾಡಿದ್ದಾರೆ.
ಬೆಂಗಳೂರು: ನಗರದಲ್ಲಿ ಮಂಗಳವಾರ ಮಧ್ಯಾಹ್ನ ಧಾರಾಕಾರವಾಗಿ ಮಳೆ ಸುರಿದಿದೆ. ಅಕಾಲಿಕ ಮಳೆಗಳೇ ನಗರದಲ್ಲಿ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿರುವುದರಿಂದ ಹೊಸ ಸರ್ಕಾರ ಕೂಡಲೇ ಮುನ್ನೆಚ್ಚರಿಕೆಯ ಕ್ರಮಗಳನ್ನು (precautionary measures) ಕೈಗೊಳ್ಳಬೇಕಿದೆ. ಯಾಕೆಂದರೆ, ಇನ್ನೆರಡು ದಿನಗಳಲ್ಲಿ ಶಾಲಾ ಕಾಲೇಜುಗಳು ಪುನರಾರಂಭವಾಗಲಿವೆ ಮತ್ತು ಮಾನ್ಸೂನ್ (Monsoon) ರಾಜ್ಯವನ್ನು ಪ್ರವೇಶಿಸಲು ಹೆಚ್ಚು ದಿನಗಳೇನೂ ಉಳಿದಿಲ್ಲ. ಒಂದು ಚಿಕ್ಕಮಳೆಗೆ ನಗರದ ರಸ್ತೆಗಳು ಜಲಾವೃತಗೊಳ್ಳುವುದನನ್ನು ನಾವು ನೋಡಿದ್ದೇವೆ. ಇನ್ನು ಜೋರು ಮಳೆ ಬಂದರೆ, ಶಾಲೆಗೆ ಹೋಗಿರುವ ಮಕ್ಕಳು ಮನೆಗೆ ವಾಪಸ್ಸಾಗುವವರೆಗೆ ಪೋಷಕರು ಜೀವ ಕೈಯಲ್ಲಿ ಹಿಡಿದುಕೊಂಡು ಕಾಯಬೇಕಾಗುತ್ತದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ನಿನ್ನೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಯೋನ್ಮುಖರಾಗುವಂತೆ ತಾಕೀತು ಮಾಡಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: May 30, 2023 04:52 PM