Sign In

By signing in or creating an account, you agree with Associated Broadcasting Company's Terms & Conditions and Privacy Policy.

Heavy rain batters Bengaluru: ರಾತ್ರಿ ಸುರಿದ ಮಳೆಗೆ ಸ್ನೇಹಿತನ ಮನೆಯಲ್ಲಿ ಬಿಟ್ಟಿದ್ದ ರಾಜ್ಯಸಭಾ ಸದಸ್ಯ ಜಗ್ಗೇಶ್ ಕಾರು ಜಲಾವೃತ!

Heavy rain batters Bengaluru: ರಾತ್ರಿ ಸುರಿದ ಮಳೆಗೆ ಸ್ನೇಹಿತನ ಮನೆಯಲ್ಲಿ ಬಿಟ್ಟಿದ್ದ ರಾಜ್ಯಸಭಾ ಸದಸ್ಯ ಜಗ್ಗೇಶ್ ಕಾರು ಜಲಾವೃತ!

ಅರುಣ್​ ಕುಮಾರ್​ ಬೆಳ್ಳಿ
|

Updated on: May 22, 2023 | 10:28 AM

ಪಂಪ್ ಸೆಟ್ ಮೂಲಕ ನೀರನ್ನು ಹೊರಹಾಕಿದ ಬಳಿಕವೇ ಸೆಲ್ಲರ್ ನಲ್ಲಿ ಜಲಾವೃತಗೊಂಡಿದ್ದ ಕಾರುಗಳನ್ನು ಕಂಡಿವೆ.

ಬೆಂಗಳೂರು: ನಗರದಲ್ಲಿ ಕಳೆದ ರಾತ್ರಿ ಸುರಿದ ಭಾರಿ ಮಳೆ ಭಾರೀ ಪ್ರಮಾಣದ ಅವಾಂತರಗಳನ್ನು ಸೃಷ್ಟಿಸಿರೋದನ್ನು ನೀವು ಟಿವಿ ಪರದೆಗಳ ಮೇಲೆ ನೋಡುತ್ತಿರುತ್ತೀರಿ ಇಲ್ಲವೇ ಖುದ್ದು ಕಷ್ಟ ಅನುಭವಿಸಿರಬಹುದು. ಧಾರಾಕಾರವಾಗಿ ಸುರಿದ ಮಳೆ ರಾಜ್ಯಸಭಾ ಸದಸ್ಯ (Rajya Sabha member) ಮತ್ತು ನಟ ಜಗ್ಗೇಶ್ (Jaggesh) ಅವರ ಕಾರನ್ನೂ ಬಿಟ್ಟಿಲ್ಲ. ಕಾರಿನ ರಪೇರಿ ಕೆಲಸದ ಹಿನ್ನೆಲೆ ಜಗ್ಗೇಶ್ ತಮ್ಮ ಐಷಾರಾಮಿ ಕಾರನ್ನು (expensive car ) ಸ್ನೇಹಿತ ಮನೆಯಲ್ಲಿ ಬಿಟ್ಟಿದ್ದರಂತೆ. ಮಳೆ ನೀರು ಸ್ನೇಹಿತ ವಾಸವಾಗಿರುವ ಮನೆಯ ಸೆಲ್ಲರ್ ನಲ್ಲಿ ನುಗ್ಗಿದ್ದರಿಂದ ಅವರ ಕಾರು ಸಂಪೂರ್ಣವಾಗಿ ಮುಳುಗಡೆಯಾಗಿತ್ತಂತೆ. ಪಂಪ್ ಸೆಟ್ ಮೂಲಕ ನೀರನ್ನು ಹೊರಹಾಕಿದ ಬಳಿಕವೇ ಸೆಲ್ಲರ್ ನಲ್ಲಿ ಜಲಾವೃತಗೊಂಡಿದ್ದ ಕಾರುಗಳನ್ನು ಕಂಡಿವೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ