ಉಡುಪಿ ಜಿಲ್ಲೆಯಲ್ಲಿ ನಿಲ್ಲದ ಮಳೆ; ಹೆಬ್ರಿ, ಕಾರ್ಕಳ, ಆಗುಂಬೆ ಸುತ್ತಮುತ್ತಲಿನ ಗ್ರಾಮಗಳು ಜಲಾವೃತ
ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಪ್ರಾಂತ್ಯದ ಏಳು ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುತ್ತಿದೆ ಮತ್ತು ಅಲ್ಲಿನ ನದಿಗಳೆಲ್ಲ ಉಕ್ಕಿ ಹರಿಯುತ್ತಿವೆ. ಮಳೆ ಹೀಗೆಯೇ ಮುಂದುವರಿದರೆ ಪ್ರವಾಹಗಳು ತಲೆದೋರಿದರೂ ಆಶ್ಚರ್ಯವಿಲ್ಲ. ಹಾಗಾಗಿ ಮುನ್ನೆಚ್ಚರಿಕೆಯ ಕ್ರಮವಾಗಿ ಈ ಜಿಲ್ಲೆಗಳ ಉಸ್ತುವಾರಿ ಸಚಿವರನ್ನು ಮುಖ್ಯಮಂತ್ರಿಯವರು ಆಯಾ ಜಿಲ್ಲೆಗಳಿಗೆ ಕಳಿಸಿದರೆ ಪ್ರಯೋಜನವಾದೀತು ಅನಿಸುತ್ತದೆ.
ಉಡುಪಿ: ಜಲ್ಲೆಯಲ್ಲಿ ಮಳೆ ಸುರಿಯುವುದು ಮುಂದುವರಿದಿದೆ. ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ ಮತ್ತು ಶಾಲಾ ಕಾಲೇಜುಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ನಮ್ಮ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಪಶ್ಚಿಮ ಘಟ್ಟ ಪ್ರದೇಶದ ಹೆಬ್ರಿ, ಕಾರ್ಕಳ ಮತ್ತು ಆಗುಂಬೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ನೆರೆಯಂಥ ಸ್ಥಿತಿ ಉಂಟಾಗಿದೆ. ಮಟಪಾಡಿಯ ನಂದನ ಕುದ್ರು, ಶೆಟ್ರ ಕುದ್ರು,ಬಲ್ಜಿಯ ಹೆಸರಿನ ಊರುಗಳಲ್ಲಿ ನೆರೆಯ ದೃಶ್ಯ ದ್ರೋಣ್ ಕೆಮೆರಾದಲ್ಲಿ ಸೆರೆಯಾಗಿರುವುದನ್ನು ಇಲ್ಲಿ ನೋಡಬಹುದು. ಈ ಗ್ರಾಮಗಳಲ್ಲಿನ ಮನೆಗಳು ಅವುಗಳ ಸುತ್ತಲಿನ ತೋಟಗದ್ದೆಗಳು ಸಂಪೂರ್ಣವಾಗಿ ಜಲಾವೃತಗೊಂಡಿವೆ. ಈ ಪ್ರದೇಶಗಳಿಗೆ ತುರ್ತು ನೆರವು ಕಲ್ಪಿಸವೇಕಿದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ವಿಧಾನ ಮಂಡಲದ ಅಧಿವೇಶನಲ್ಲಿ ಬ್ಯೂಸಿಯಾಗಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಐದು ದಿನ ಭಾರಿ ಮಳೆ