ಉಡುಪಿಯಲ್ಲಿ ನಿಲ್ಲದ ಮಳೆ, ಪಾಪಾನಾಶಿನಿ ನದಿಯಿಂದ ಊರುಗಳೊಳಗೆ ನುಗ್ಗಿದ ನೀರು
ಮಳೆ ಇನ್ನೂ 3-4ದಿನಗಳ ಕಾಲ ಸುರಿಯುವ ಮುನ್ಸೂಚನೆ ಇರುವುದರಿಂದ ತಗ್ಗು ಪ್ರದೇಶಗಳಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ ಎಂದು ವರದಿಗಾರ ಹೇಳುತ್ತಾರೆ. ಕರಾವಳಿ ಪ್ರದೇಶದ ಎಲ್ಲ ನದಿಗಳು ಉಕ್ಕಿ ಹರಿಯುತ್ತಿವೆ ಮತ್ತು ನದಿಪಾತ್ರದ ಜನ ಪ್ರವಾಹದ ಭೀತಿಯಲ್ಲಿದ್ದಾರೆ.
ಉಡುಪಿ: ಈಗ ಜಾರಿಯಲ್ಲಿರುವ ವಿಧಾನಸಭಾದ ಮುಂಗಾರು ಅಧಿವೇಶನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರ ನಡುವಿನ ಕಿತ್ತಾಟ ಒಂದು ಹೊತ್ತಿಗೆ ನಿಂತೀತು ಆದರೆ ಉಡುಪಿ ಜಿಲ್ಲೆಯಲ್ಲಿ ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಮಳೆ ಮಾತ್ರ ನಿಲ್ಲಲಾರದು ಮಾರಾಯ್ರೇ. ನಮ್ಮ ಉಡುಪಿ ಜಿಲ್ಲಾ ವರದಿಗಾರರು ನೀಡುತ್ತಿರುವ ಮಾಹಿತಿ ಪ್ರಕಾರ ಕಳೆದ ರಾತ್ರಿಯಿಂದ ಉಡುಪಿ ಜಿಲ್ಲೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸತತವಾಗಿ ಮಳೆ ಸುರಿಯುತ್ತಿದೆ. ವರದಿಗಾರ ನಿಂತಿರೋದು ಉಡುಪಿ ನಗರ ಹೊರವಲಯದಲ್ಲಿರುರುವ ಉದ್ಯಾವರ ಸಮೀಪದ ಬೊಳ್ಜೆ ಹೆಸರಿನ ಸ್ಥಳದಲ್ಲಿ. ಪಾಪನಾಶಿನಿ ನದಿ ತುಂಬಿ ಹರಿಯುತ್ತಿರುವುದರಿಂದ ಬೊಳ್ಜೆಯಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಇಲ್ಲ್ಲೊಬ್ಬ ಮಹಿಳೆ ಮೊಣಕಾಲು ಮಟ್ಟದ ನೀರಲ್ಲಿ ದನದ ಜೊತೆ ಬರುತ್ತಿರುವವುದನನ್ನು ನೋಡಬಹುದು. ಹತ್ತಿರದಲ್ಲೊಂದು ಬಂಗ್ಲೆಯೂ ಸಂಪೂರ್ಣವಾಗಿ ಜಲಾವೃತ. ಎತ್ತ ನೋಡಿದರೂ ಬರೀ ನೀರು.
ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!