ಉಡುಪಿಯಲ್ಲಿ ಮುಂದುವರೆದ ನಿರಂತರ ಮಳೆ: ಮತ್ತೊಂದು ಗುಡ್ಡ ಕುಸಿಯುವ ಭೀತಿ!
ಭಾರಿ ಮಳೆಯಿಂದಾಗಿ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಸೋಮೇಶ್ವರ ಬೀಚ್ ಬಳಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ. ನಿರಂತರ ಮಳೆ ಮುಂದುವರೆದು ಗುಡ್ಡ ಸಂಪೂರ್ಣ ಕುಸಿದರೆ ಬೈಂದೂರು ಪ್ರಸಿದ್ಧ ಪ್ರವಾಸಿತಾಣ ಕಣ್ಮರೆ ಆಗುವ ಸಾಧ್ಯತೆ ಇದೆ. ಈಗಾಗಲೇ ಸುಮಾರು 30 ಮನೆಗಳ ಸಂಪರ್ಕ ಕಡಿತವಾಗಿದೆ.
ಉಡುಪಿ, ಜುಲೈ 18: ಎಡೆಬಿಡದೆ ಸುರಿಯುತ್ತಿರುವ ಮಳೆ (Rain) ಕೆಲ ಸಂಕಷ್ಟಗಳನ್ನು ಸೃಷ್ಟಿಸುತ್ತಿದೆ. ಜಿಲ್ಲೆಯ ಬೈಂದೂರು ತಾಲೂಕಿನ ಸೋಮೇಶ್ವರ ಬೀಚ್ ಬಳಿ ಪ್ರಸಿದ್ಧ ಪ್ರವಾಸಿತಾಣದಲ್ಲಿ ಗುಡ್ಡ ಕುಸಿತದ ಭೀತಿ (Hill Collapse) ಎದುರಾಗಿದೆ. ನಿರಂತರ ಮಳೆಯಿಂದ ಗುಡ್ಡದ ಮೇಲೆ ನಿರ್ಮಾಣ ಹಂತದಲ್ಲಿರುವ ಕಟ್ಟಡವು ಕುಸಿಯುವ ಆತಂಕ ಎದುರಾಗಿದೆ. ಗುಡ್ಡ ಕುಸಿಯುವ ಭೀತಿ ಹಿನ್ನೆಲೆ ಸೋಮೇಶ್ವರ ಬೀಚ್ ರಸ್ತೆ ಬಂದ್ ಮಾಡಲಾಗಿದೆ. ಸುಮಾರು 30 ಮನೆಗಳ ಸಂಪರ್ಕ ಕಡಿತವಾಗಿದೆ. ಗುಡ್ಡ ಸಂಪೂರ್ಣ ಕುಸಿದರೆ ಬೈಂದೂರು ಪ್ರಸಿದ್ಧ ಪ್ರವಾಸಿತಾಣ ಕಣ್ಮರೆ ಆಗಲಿದೆ. ಗುಡ್ಡದ ಮೇಲಿರುವ ಫಾರೆಸ್ಟ್ ಐಬಿಗೂ ಹಾನಿಯಾಗುವ ಸಾಧ್ಯತೆ ಇದೆ. ಗುಡ್ಡದ ಕೆಳ ಭಾಗದಲ್ಲಿರುವ ಮನೆಗಳಿಗೂ ಆತಂಕ ತಪ್ಪಿದ್ದಲ್ಲ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos