ದೇವನಹಳ್ಳಿ: ಹಬ್ಬದ ವಾರಾಂತ್ಯದ ನಂತರ ಮನೆಗಳಿಂದ ಹೊರಬಿದ್ದವರಿಗೆ ಮಳೆರಾಯನ ಕಾಟ
ಲಕ್ಷದ್ವೀಪದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅಕ್ಟೋಬರ್ 14ರವರೆಗೆ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಕಳೆದವಾರ ಹೇಳಿತ್ತು. ಅದರ ಪ್ರಕಾರ ಇವತ್ತು ಕೊನೆಯ ದಿನ, ನಾಳೆಯಿಂದ ಪ್ರಾಯಶಃ ಮಳೆಯಾಗಲಿಕ್ಕಿಲ್ಲ.
ದೇವನಹಳ್ಳಿ: ವಿಜಯದಶಮಿ ಹಬ್ಬದ ಪ್ರಯುಕ್ತ ವಿಸ್ತೃತ ವೀಕೆಂಡ್ ನಂತರ ಇಂದು ಬೆಳಗ್ಗೆ ಶಾಲಾ-ಕಾಲೇಜು, ಆಫೀಸು ಮತ್ತು ಬೇರೆ ಕೆಲಸಗಳಿಗೆ ಹೋಗುವವರಿಗೆ ಬೆಳಗ್ಗೆಯೇ ಮಳೆ ಕಾಟ. ದೇವನಹಳ್ಳಿ ಸೇರಿದಂತೆ ಬೆಂಗಳೂರು ಸುತ್ತುಮತ್ತ ಜಿಟಿಜಿಟಿ ಮಳೆ. ಶಾಲೆಗಳಿಗೆ ಹೋಗುವ ಮಕ್ಕಳು ಕೊಡೆಗಳನ್ನು ಹಿಡಿದು ರಸ್ತೆಗೆ ಬಂದಿರುವುದನ್ನು ನೋಡಬಹುದು. ಕೆಲಸಕ್ಕೆ ಹೋಗುವ ಜನ ಸಹ ಕಚೇರಿಗಳನ್ನು ತಲುಪುವ ತರಾತುರಿಯಲ್ಲಿ ಬಸ್ ನಿಲ್ದಾಣದ ಕಡೆ ಧಾವಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ವೀಕೆಂಡ್ ಮಸ್ತಿಯಲ್ಲಿರುವ ಬೆಂಗಳೂರಿಗರಿಗೆ ತುಂತುರು ಮಳೆ ಚುಂಬನ; ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್