ಕೇವಲ ಒಂದುತಾಸಿನ ಮಳೆಗೆ ಬೀದರ್ ನಗರದ ಮುಖ್ಯರಸ್ತೆ ಹೀಗಾದರೆ ಉಳಿದ ರಸ್ತೆಗಳ ಗತಿಯೇನು?
ಕೇವಲ ಒಂದು ಗಂಟೆ ಸುರಿದ ಮಳೆಗೆ ರಸ್ತೆಯ ಸ್ಥಿತಿ ಹೀಗಾಗಿದೆ. ರಸ್ತೆಯ ಮೇಲೆ ವಾಹನಗಳ ಅರ್ಧ ಟೈರು ಮುಳುಗುವಷ್ಟು ನೀರು. ಕೊಂಚ ಯಾಮಾರಿದರೆ ಸವಾರರಿಗೆ ರಸ್ತೆಯಲ್ಲೇ ಸ್ನಾನ. ಓಕೆ, ಸ್ವಲ್ಪ ಮುಂದೆ ಹೋಗಿ ನೋಡಿದರೆ ಮನೆಯ ಅವರಣದೊಳಗೆ ನೀರು ನುಗ್ಗಿದ್ದು ಕಾಣುತ್ತದೆ. ನೀರು ಮನೆಯೊಳಗೆ ನುಸುಳದಂತೆ ಜನ ಬಾಗಿಲಿಗೆ ಪ್ಲಾಸ್ಟಿಕ್ ಚೀಲಗಳನ್ನು ಕಟ್ಟಿ, ಇಟ್ಟು ಹೇಗೋ ತಡೆದಿದ್ದಾರೆ, ಅದರೆ ಮಳೆ ಪ್ರಮಾಣ ಹೆಚ್ಚಿದರೆ ನೀರು ಒಳನುಗ್ಗೋದು ಖಚಿತ.
ಬೆಂಗಳೂರು, ಆಗಸ್ಟ್ 5: ಹಿರಿಯ ಕಾಂಗ್ರೆಸ್ಸಿಗ ಭೀಮಣ್ಣ ಖಂಡ್ರೆ ತೊಂಬತ್ತರ ದಶಕದಲ್ಲಿ ರಾಜ್ಯದ ಮಂತ್ರಿಯಾಗಿದ್ದರು. ಅವರ ಮಗ ಈಶ್ವರ್ ಖಂಡ್ರೆ (Eshwar Khandre) ಭಾಲ್ಕಿ ಕ್ಷೇತ್ರದಿಂದ ಸತತವಾಗಿ ವಿಧಾನಸಭೆಗೆ ಆಯ್ಕೆಯಾಗುತ್ತಿದ್ದಾರೆ. ಈಶ್ವರ್ ಅವರ ಮಗ ಸಾಗರ್ ಖಂಡ್ರೆ ಬೀದರ್ ಸಂಸದ. ಅಷ್ಟಾಗಿಯೂ ಬೀದರ್ ನಗರದ ಒಂದು ಪ್ರಮುಖ ರಸ್ತೆ ಇಂಥ ದುಸ್ಥಿತಿಯಲ್ಲಿದೆ. ಸಾಗರ್ಕ್ಕಿಂತ ಮೊದಲು ಬಿಜೆಪಿಯ ಭಗವಂತ ಖೂಬಾ ಸಂಸದರಾಗಿದ್ದರು ಮತ್ತು ಕೇಂದ್ರದಲ್ಲಿ ಮಿನಿಸ್ಟ್ರು ಕೂಡ ಆಗಿದ್ದರು. ಆದರೂ ಈ ರಸ್ತೆ ಹೀಗಿದೆ! ಯಾರು ಮಿನಿಸ್ಟ್ರಾದರೇನು, ಸಂಸದರಾದರೇನು? ನಾನಿರೋದೇ ಹೀಗೆ ಅನ್ನೋದು ರಸ್ತೆಯ ಧೋರಣೆಯೂ ಆಗಿರಬಹುದು! ಆದರೆ ಅನುಭವಿಸುತ್ತಿರುವವರು ಮಾತ್ರ ಬಡಪಾಯಿ ಬೀದರ್ ಜನ.
ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರ ಬಂಡೆಯಂತೆ ಅಚಲ, ಯಾವ ಬದಲಾವಣೆಯೂ ಇಲ್ಲ: ಈಶ್ವರ್ ಖಂಡ್ರೆ, ಸಚಿವ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
