Karnataka Transport Strike; ಕೋರ್ಟ್ ಆದೇಶದ ಹೊರತಾಗಿಯೂ ಮುಷ್ಕರ ಮಾಡಿದ್ದು ನ್ಯಾಯಾಂಗ ನಿಂದನೆ: ವಕೀಲೆ
ಕೋರ್ಟ್ ಆದೇಶ ಕೈಸೇರುವ ಹೊತ್ತಿಗೆ ಮುಷ್ಕರ ಆರಂಭಿಸಿಯಾಗಿತ್ತು ಅಂತ ಟೆಕ್ನಿಕಲ್ ಅಂಶವನ್ನು ಮುಂದೆ ಮಾಡೋದು ಒಂದು ನೆಪವಷ್ಟೇ, ಜಂಟಿ ಕ್ರಿಯಾ ಸಮಿತಿಯ ಅಧ್ಯಕ್ಷರು ಹೆಚ್ವಿ ಸುಬ್ಬರಾವ್, ಸಮಿತಿಯ ಅಧೀನದಲ್ಲಿ 5 ಸಂಘಟನೆಗಳಿವೆ, ನಾವು ಸುಬ್ಬಾರಾವ್ ಅವರಿಗೆ ನಿನ್ನೆ ಸಾಯಂಕಾಲ 7 ಗಂಟೆಯಷ್ಟೊತ್ತಿಗೆ ನ್ಯಾಯಾಲಯದ ಅದೇಶವನ್ನು ತಲುಪಿಸಿದ್ದೇವೆ, ಅಷ್ಟೊತ್ತಿಗಾಗಲೇ ವಿಷಯ ಹಬ್ಬಿತ್ತು ಎಂದು ದೀಕ್ಷಾ ಹೇಳಿದರು.
ಬೆಂಗಳೂರು, ಆಗಸ್ಟ್ 5: ಕೆಎಸ್ಅರ್ಟಿಸಿ ನೌಕರರ ಸಂಘ ನಿನ್ನೆ ಮಧ್ಯರಾತ್ರಿಯಿಂದ ಮುಷ್ಕರ ಶುರುಮಾಡಿದರೂ ಅದು ಹೆಚ್ಚಿನ ಸ್ಥಳಗಳಲ್ಲಿ ಪ್ರಭಾವ ಮತ್ತು ಪರಿಣಾಮ ಬೀರದೆ ಹೋಗಿದ್ದಕ್ಕೆ ಈ ಯುವ ವಕೀಲೆ ದೀಕ್ಷಾ ಅಮೃತೇಶ್ ಕಾರಣ. ಸಾರಿಗೆ ನೌಕರರು ಮುಷ್ಕರಕ್ಕಿಳಿಯುವ ವಿಷಯ ಗೊತ್ತಾಗುತ್ತಿದ್ದಂತೆಯೇ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದನ್ನು ಸಲ್ಲಿಸಿ ಸಾಯಂಕಾಲದ ಹೊತ್ತಿಗೆ ನ್ಯಾಯಾಲಯದಿಂದ ಮುಷ್ಕರವನ್ನು ಒಂದು ದಿನದ ಮಟ್ಟಿಗೆ ಸ್ಥಗಿತಗೊಳಿಸುವಂತೆ ಆದೇಶ ಪಡೆದಿದ್ದು ಚಿಕ್ಕ ಸಂಗತಿಯೇನಲ್ಲ. ಕೋರ್ಟ್ ತನ್ನ ಆದೇಶದಲ್ಲಿ ಮುಷ್ಕರವನ್ನು ಒಂದು ದಿನ ಮುಂದೂಡಬೇಕು, ಆರಂಭಿಸಿದ್ದರೆ ಸ್ಥಗಿತಗೊಳಿಸಬೇಕೆಂದು ಸ್ಪಷ್ಟವಾಗಿ ಹೇಳಿತ್ತು. ಸಾರಿಗೆ ವ್ಯವಸ್ಥೆಯು ಎಸ್ಮಾ ವ್ಯಾಪ್ತಿಯಲ್ಲಿ ಬರೋದ್ರಿಂದ ಕೆಎಸ್ಆರ್ಟಿಸಿ ನೌಕರರು ಮುಷ್ಕರ ಮಾಡಿದ್ದು ತಪ್ಪು ಮತ್ತು ನ್ಯಾಯಾಲಯದ ಆದೇಶದ ಹೊರತಾಗಿಯೂ ಮುಷ್ಕರ ಮಾಡಿದ್ದು ನ್ಯಾಯಾಂಗ ನಿಂದನೆಯಾಗಿದೆ ಅಂತ ಕೋರ್ಟ್ ಯೂನಿಯನ್ ಅನ್ನು ತರಾಟೆಗೆ ತೆಗೆದುಕೊಂಡಿತು ಎಂದು ದೀಕ್ಷಾ ಹೇಳಿದರು.
ಇದನ್ನೂ ಓದಿ: Karnataka Transport Strike; ಕೋರ್ಟ್ ಆದೇಶ ನಮ್ಮ ಕೈಸೇರುವ ಹೊತ್ತಿಗೆ ಮುಷ್ಕರ ಶುರುವಾಗಿತ್ತು: ಅನಂತ್ ಸುಬ್ಬಾರಾವ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

