ವಿಡಿಯೋ: ರಾಜ್ ಬಿ ಶೆಟ್ಟಿಯ ಹುಲಿ ಕುಣಿತಕ್ಕೆ ಪ್ರೇಕ್ಷಕರು ಫಿದಾ

|

Updated on: Oct 12, 2024 | 4:03 PM

Raj B Shetty: ಖ್ಯಾತ ನಟ, ನಿರ್ದೇಶಕ ರಾಜ್ ಬಿ ಶೆಟ್ಟಿ ಮಂಗಳೂರು ದಸರಾನಲ್ಲಿ ಹುಲಿ ಕುಣಿತ ಮಾಡಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಮಂಗಳೂರು ದಸರಾಕ್ಕೆ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರುಗಳು ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮಂಗಳೂರು ದಸರಾ ಅದ್ದೂರಿಯಾಗಿ ನಡೆದಿದ್ದು, ನಿನ್ನೆ ಮಂಗಳೂರು ದಸರಾ ಕಾರ್ಯಕ್ರಮಕ್ಕೆ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಮತ್ತು ರಾಜ್ ಬಿ ಶೆಟ್ಟಿ ಅವರುಗಳು ಆಗಮಿಸಿದ್ದರು. ಕರಾವಳಿಯ ಜನಪ್ರಿಯ ಕಲೆಗಳ ಪ್ರದರ್ಶನವನ್ನು ವೇದಿಕೆ ಮೇಲೆ ಮಾಡಲಾಯ್ತು. ವೇದಿಕೆ ಮೇಲೆ ರಾಜ್ ಬಿ ಶೆಟ್ಟಿ ಹುಲಿ ಕುಣಿತ ಮಾಡಿ ರಂಜಿಸಿದರು. ಆ ನಂತರ ಪ್ರಮೋದ್ ಶೆಟ್ಟಿ ಸಹ ವೇದಿಕೆ ಏರಿ ಇತರೆ ಕೆಲ ಅತಿಥಿಗಳೊಟ್ಟಿಗೆ ಡ್ಯಾನ್ಸ್ ಮಾಡಿ ರಂಜಿಸಿದರು. ರಿಷಬ್ ಶೆಟ್ಟಿ ಅವರು ಕುಣಿಯಲಿಲ್ಲ. ಕಳೆದ ಬಾರಿಯೂ ಸಹ ರಾಜ್ ಬಿ ಶೆಟ್ಟಿ ಮಂಗಳೂರು ದಸರಾನಲ್ಲಿ ಹುಲಿ ಕುಣಿತ ಮಾಡಿದ್ದರು. ಈಗ ಮತ್ತೊಮ್ಮೆ ಹುಲಿ ಕುಣಿತ ಮಾಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ