Mysuru Dasara Mahotsav-2024: ಜಂಬೂ ಸವಾರಿಯ ದಿನ ನಗರದಲ್ಲಿ ಜೋರು ಮಳೆ!

Mysuru Dasara Mahotsav-2024: ಜಂಬೂ ಸವಾರಿಯ ದಿನ ನಗರದಲ್ಲಿ ಜೋರು ಮಳೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 12, 2024 | 4:58 PM

Mysuru Dasara Mahotsav-2024: ತಮಟೆ ಬಾರಿಸುವ ತಂಡದಲ್ಲಿದ್ದ ಒಬ್ಬ ಮಹಿಳೆ ಆವೇಶಕ್ಕೊಳಗಾದವರ ಹಾಗೆ ಬಾರಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಿಜಯನಗರದದ ಟ್ಯಾಬ್ಲೋ ಮುಂದೆ ಡ್ರಮ್ ಮತ್ತು ತಮಟೆ ಬಾರಿಸುವವರ ಜುಗಲ್ ಬಂದಿಯೂ ನಡೆಯುತ್ತದೆ. ವಾದ್ಯಮೇಳವನ್ನು ಜನ ಬಹಳಷ್ಟು ಎಂಜಾಯ್ ಮಾಡುತ್ತಿರುವುದು ಸುಳ್ಳಲ್ಲ.

ಮೈಸೂರು: ಇದೊಂಥರ ಆ್ಯಂಟಿ ಕ್ಲೈಮ್ಯಾಕ್ಸ್ ಮಾರಾಯ್ರೇ! ನವರಾತ್ರಿಯ ಕೊನೆಯ ದಿನ ಅಂದರೆ ಜಂಬೂ ಸವಾರಿಯ ದಿನ ನಗರದಲ್ಲಿ ಮಳೆರಾಯನ ಕಾಟ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬಂದಿರುವ ಜನರ ಉತ್ಸಾಹವೇನೂ ಕಮ್ಮಿಯಾಗಿಲ್ಲ. ಸ್ತಬ್ಧಚಿತ್ರಗಳ ಮೆರವಣಿಗೆ ಆರಂಭವಾದಾಗ ಮಳೆ ಸುರಿಯುವುದು ಶುರುವಾಯಿತಾದರೂ ಸ್ವಲ್ಪ ಸಮಯದ ನಂತರ ಅಬ್ಬರ ಕಮ್ಮಿಯಾಯಿತು. ಆದರೆ ತಮಟೆ ಮತ್ತು ಡ್ರಮ್ಸ್ ಬಾರಿಸುವವರ ಹುಮ್ಮಸ್ಸನ್ನು ಗಮನಿಸಿ, ಏನೂ ನಡೆದಿಲ್ಲ ಎಂಬಂತೆ ಬಾರಿಸುವುದರಲ್ಲಿ ಮಗ್ನರಾಗಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಮೈಸೂರು ಜಂಬೂ ಸವಾರಿಗೆ ಕೊಪ್ಪಳದಲ್ಲಿ ಶತಮಾನದ ಹಿಂದೆ ನಡೆದ ಅಂಬಾರಿ ಮೆರವಣಿಗೆ ಪ್ರೇರಣೆ