ಚನ್ನಪಟ್ಟಣ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧಿಸೋದು ಅಂತ ಅಪರೋಕ್ಷವಾಗಿ ಹೇಳಿದ ನಿಖಿಲ್
ಚನ್ನಪಟ್ಟಣದಲ್ಲಿ ಗೆಲ್ಲಲು ತಾನೇ ನಿಲ್ಲಬೇಕು ಅಂತೇನಿಲ್ಲ, ಜೆಡಿಎಸ್ ಪಕ್ಷದ ಒಬ್ಬ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲ್ಲುತ್ತಾನೆ, ಯಾಕೆಂದರೆ ಅಲ್ಲಿನ 80 ಸಾವಿರ ವೋಟು ಪಕ್ಷದ ಅಭ್ಯರ್ಥಿಗೆ ಕಟ್ಟಿಟ್ಟ ಬುತ್ತಿ, ಲೀಡ್ ಗೋಸ್ಕರ 25 ಸಾವಿರ ವೋಟುಗಳಿಗಾಗಿ ಹೋರಾಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.
ರಾಮನಗರ: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಯುವ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ನಾಯಕನೇ ಅಭ್ಯರ್ಥಿಯಾಗೋದು ಅನ್ನೋದನ್ನು ಅಪರೋಕ್ಷವಾಗಿ ಹೇಳಿದರು. ಚನ್ನಪಟ್ಟಣ ಯಾವತ್ತಿಗೂ ಜೆಡಿಎಸ್ ಭದ್ರಕೋಟೆ, ತನ್ನ ತಂದೆ ಈ ಕ್ಷೇತ್ರದಿಂದ ಎರಡು ಬಾರಿ ಅಯ್ಕೆಯಾಗಿದ್ದಾರೆ ಮತ್ತು 2013 ರ ಚುನಾವಣೆಯಲ್ಲಿ ಅಲ್ಪ ಅಂತರದಿಂದ ಸೋತಿದ್ದಾರೆ ಎಂದು ನಿಖಿಲ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚನ್ನಪಟ್ಟಣ ಉಪಚುನಾವಣೆ: ಬಿಜೆಪಿ ಜೆಡಿಎಸ್ ಕಾರ್ಯಕರ್ತರಲ್ಲಿ ಮೂಡದ ಒಮ್ಮತ, ಯೋಗೇಶ್ವರ್ ಪರ ವಿಜಯೇಂದ್ರ ಬ್ಯಾಟಿಂಗ್
Latest Videos