ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ಈ ಮೂವರು ಇರಲೇ ಬೇಕು: ಯಾರು ಆ ಮೂವರು?

Raj B Shetty: ರಾಜ್ ಬಿ ಶೆಟ್ಟಿ ನಟನೆಯ 'ಟೋಬಿ' ಸಿನಿಮಾ ಆಗಸ್ಟ್ 25ರಂದು ತೆರೆಗೆ ಬರುತ್ತಿದೆ. ರಾಜ್ ಬಿ ಶೆಟ್ಟಿ ತಮ್ಮ ತಂತ್ರಜ್ಞರನ್ನು ಬದಲಾಯಿಸುವುದಿಲ್ಲ, ಅದರಲ್ಲಿಯೂ ಈ ಇಬ್ಬರು ತಂತ್ರಜ್ಞರು ಅವರೊಟ್ಟಿಗಿಲ್ಲದಿದ್ದರೆ ಸಿನಿಮಾ ಮಾಡುವುದಿಲ್ಲವಂತೆ ರಾಜ್. ಯಾರದು?

ರಾಜ್ ಬಿ ಶೆಟ್ಟಿ ಸಿನಿಮಾದಲ್ಲಿ ಈ ಮೂವರು ಇರಲೇ ಬೇಕು: ಯಾರು ಆ ಮೂವರು?
|

Updated on: Aug 23, 2023 | 10:34 PM

ರಾಜ್ ಬಿ ಶೆಟ್ಟಿ (Raj B Shetty) ನಟನೆಯ ಹೊಸ ಸಿನಿಮಾ ‘ಟೋಬಿ‘ (Toby) ಇನ್ನೆರಡು ದಿನದಲ್ಲಿ ಚಿತ್ರಮಂದಿರಕ್ಕೆ ಬರುತ್ತಿದೆ. ರಾಜ್ ಬಿ ಶೆಟ್ಟಿ ಈ ಸಿನಿಮಾಕ್ಕೆ ಚಿತ್ರಕತೆ ಬರೆದು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ, ತಮ್ಮ ಸಿನಿಮಾಗಳ ನಟರು ಬದಲಾಯಿಸುತ್ತಾರೆ ಆದರೆ ತಂತ್ರಜ್ಞರನ್ನಲ್ಲ. ಅವರೇ ಹೇಳಿಕೊಂಡಿರುವಂತೆ ಅವರ ಸಿನಿಮಾದಲ್ಲಿ ಮೂವರು ಇರಲೇ ಬೇಕಂತೆ. ಒಂದು ಸ್ವತಃ ರಾಜ್ ಬಿ ಶೆಟ್ಟಿ, ಸಂಗೀತ ನಿರ್ದೇಶಕ ಮಿದುನ್ ಮುಕುಂದನ್ ಹಾಗೂ ಸಿನಿಮಾಟೊಗ್ರಫರ್ ಹಾಗೂ ಎಡಿಟರ್ ಪ್ರವೀಣ್ ಶಿಯಾನ್. ಮಿದುನ್ ಹಾಗೂ ಪ್ರವೀಣ್ ಇಲ್ಲದೆ ರಾಜ್ ಬಿ ಶೆಟ್ಟಿ ಸಿನಿಮಾ ಮಾಡುವುದೇ ಇಲ್ಲವಂತೆ. ಅದೇಕೆ? ಅವರೇ ವಿವರಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us