ರಮ್ಯಾ ಜತೆಗಿನ ಸಿನಿಮಾ ಬಗ್ಗೆ ವಿಶೇಷ ಮಾಹಿತಿ ನೀಡಿದ ನಟ, ನಿರ್ದೇಶಕ ರಾಜ್​ ಬಿ. ಶೆಟ್ಟಿ

| Updated By: ಮದನ್​ ಕುಮಾರ್​

Updated on: Oct 09, 2022 | 10:42 PM

Raj B Shetty | Filmfare: ‘ನಾವೆಲ್ಲ ಹಂಸಲೇಖ ಅವರ ಹಾಡುಗಳನ್ನು ಕೇಳಿಕೊಂಡು ಬೆಳೆದವರು’ ಎಂದು ರಾಜ್​ ಬಿ. ಶೆಟ್ಟಿ ಹೇಳಿದ್ದಾರೆ. ಫಿಲ್ಮ್​ಫೇರ್​ ಕಾರ್ಯಕ್ರಮದ ವೇಳೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಫಿಲ್ಮ್​ಫೇರ್​ ಅವಾರ್ಡ್ಸ್​ (Filmfare 2022) ಕಾರ್ಯಕ್ರಮ ನಡೆದಿದೆ. ಭಾನುವಾರ (ಅ.9) ನಡೆದ ಈ ಸಮಾರಂಭಕ್ಕೆ ರಾಜ್​ ಬಿ. ಶೆಟ್ಟಿ (Raj B Shetty) ಹಾಜರಿ ಹಾಕಿದರು. ಈ ವೇಳೆ ಅವರು ರಮ್ಯಾ (Ramya) ಜೊತೆಗಿನ ಹೊಸ ಸಿನಿಮಾ ಬಗ್ಗೆ ಒಂದಷ್ಟು ವಿಶೇಷ ಮಾಹಿತಿ ಹಂಚಿಕೊಂಡರು. ಹಂಸಲೇಖ ಅವರ ‘ಸ್ವಾತಿ ಮುತ್ತಿನ ಮಳೆ ಹನಿಯೇ..’ ಗೀತೆಯಿಂದಲೇ ಟೈಟಲ್​ ಆಯ್ಕೆ ಮಾಡಿಕೊಂಡಿದ್ದಕ್ಕೆ ಕಾರಣ ಏನು ಎಂಬುದನ್ನು ರಾಜ್​ ಬಿ. ಶೆಟ್ಟಿ ತಿಳಿಸಿದರು. ಇದು ಮಹಿಳಾ ಪ್ರಧಾನ ಸಿನಿಮಾ ಆಗಿರಲಿದೆ ಎಂಬ ವಿಷಯವನ್ನು ಅವರು ಬಿಟ್ಟುಕೊಟ್ಟಿದ್ದಾರೆ. ಜತೆಗೆ ರಮ್ಯಾ ಅವರ ರಿಯಲ್​ ಲೈಫ್​ ವ್ಯಕ್ತಿತ್ವದ ಬಗ್ಗೆಯೂ ರಾಜ್​ ಬಿ. ಶೆಟ್ಟಿ ಮಾತನಾಡಿದ್ದಾರೆ.

 

Published on: Oct 09, 2022 10:42 PM