Chikkamagalur News: ಅನುಕಂಪ ಗಿಟ್ಟಿಸಿ ಹೈಟೆಕ್ ಹಣ ವಸೂಲಿ ದಂಧೆ; ಪ್ರಶ್ನಿಸುತ್ತಿದ್ದಂತೆಯೇ ಆಟೊ ಏರಿ ಪರಾರಿಯಾದ ಯುವತಿಯರು
ರಾಜಸ್ಥಾನ ಮೂಲದ ಐವರು ಯುವತಿಯರು ಜನರ ಅನುಕಂಪ ಗಿಟ್ಟಿಸಿಕೊಂಡು ದುಡ್ಡು ವಸೂಲಿ ಮಾಡುತ್ತಿರುವ ವಿಚಾರ ಬಯಲಾಗಿದೆ.
ಚಿಕ್ಕಮಗಳೂರು: ರಾಜಸ್ಥಾನ ಮೂಲದ ಐವರು ಯುವತಿಯರು ಜನರ ಅನುಕಂಪ ಗಿಟ್ಟಿಸಿಕೊಂಡು ದುಡ್ಡು ವಸೂಲಿ ಮಾಡುತ್ತಿರುವ ವಿಚಾರ ಬಯಲಾಗಿದೆ. ಚಿಕ್ಕಮಗಳೂರು ಪಟ್ಟಣದಲ್ಲಿ (Chikkamagalur Town) ಯುವತಿಯರು ದುಡ್ಡು ಸಂಗ್ರಹಿಸುತ್ತಿದ್ದರು. ಮನೆ ಬಿದ್ದು ಹೋಗಿದೆ, ಹಾಕೋಕೆ ಬಟ್ಟೆ ಇಲ್ಲ. ಪ್ರಕೃತಿ ವಿಕೋಪದಿಂದ ಮನೆ-ಆಸ್ತಿ ಕಳೆದುಕೊಂಡಿದ್ದೇವೆ, ನೆರವಾಗಿ ಎಂದು ಹೇಳುವ ಈ ಯುವತಿಯರು ಎಂದು ಹಣಕ್ಕಾಗಿ ಸ್ಥಳಿಯರನ್ನು ಪೀಡಿಸುತ್ತಿದ್ದರು. 10 ರೂ, 20 ರೂ, ಕೊಟ್ಟರೆ ತೆಗೆದುಕೊಳ್ಳದ ಯುವತಿಯರು 100, 200 ರೂಪಾಯಿಯನ್ನೇ ಕೊಡ್ಬೇಕು ಎಂದು ಬೇಡಿಕೆ ಇಡುತ್ತಿದ್ದರು. ಚಿಕ್ಕಮಗಳೂರು ನಗರದ ಮನೆ-ಅಂಗಡಿಗಳಲ್ಲಿ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.
ಅಂಗಡಿಗಳಿಗೆ ತೆರಳಿ ಹಣ ಕೇಳುತ್ತಿದ್ದ ಯುವತಿಯರನ್ನು ಚಿಕ್ಕಮಗಳೂರು ನಗರ ನಿವಾಸಿಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಿಯರು ಪ್ರಶ್ನೆ ಮಾಡುತ್ತಿದ್ದಂತೆ ಯುವತಿಯರು ಆಟೋ ಹತ್ತಿ ಪರಾರಿಯಾಗಿದ್ದಾರೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ