ಕೆಣಕಿದ ಧ್ರುವಂತ್​ಗೆ ಹೊಡೆಯೋಕೆ ಹೋದ ರಜತ್; ರಣರಂಗವಾಯಿತು ಮನೆ

Updated on: Dec 09, 2025 | 8:29 AM

Bigg Boss Kannada New Promo: ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಎಂದರೆ ಎಲ್ಲರೂ ಉರಿದು ಬೀಳುತ್ತಾರೆ. ದೊಡ್ಡ ಯುದ್ಧಗಳು ನಡೆದು ಹೋಗುತ್ತವೆ. ಈಗ ಹಾಗೆಯೇ ಆಗಿದೆ. ನಾಮಿನೇಷನ್ ವಿಷಯದಲ್ಲಿ ರಜತ್ ಅವರು ಕಿತ್ತಾಡಿಕೊಂಡಿದ್ದಾರೆ. ಈ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ವಿಷಯ ಬಂದಾಗ ಎಲ್ಲರೂ ಬದಲಾಗುತ್ತಾರೆ. ಕಿತ್ತಾಡಿಕೊಳ್ಳುತ್ತಾರೆ. ಈಗ ಕಾವ್ಯಾ ಅವರು ರಜತ್​ನ ನಾಮಿನೇಟ್ ಮಾಡಿದ್ದಾರೆ. ಇದರಿಂದ ಅವರು ಸಿಟ್ಟಾದರು. ಆ ಬಳಿಕ ಧ್ರುವಂತ್ ಹಾಗೂ ರಜತ್ ಮಧ್ಯೆ ಕಿತ್ತಾಟ ಆರಂಭ ಆಯಿತು. ಇದು ಕಿತ್ತಾಟಕ್ಕೆ ದಾರಿ ಮಾಡಿಕೊಟ್ಟಿತು. ರಜತ್ ಅವರು ಧ್ರುವಂತ್​ಗೆ ಹೊಡೆಯೋಕೆ ಹೋದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 09, 2025 08:28 AM