ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್

Updated on: Jan 05, 2025 | 9:53 PM

‘ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಗೆ ಅಗತ್ಯ ಇಲ್ಲದ ವ್ಯಕ್ತಿ. ಹೌದು ಅಥವಾ ಅಲ್ಲ’ ಎಂದು ಸುದೀಪ್ ಅವರು ಪ್ರಶ್ನೆ ಹೇಳಿದರು. ಅಚ್ಚರಿಯ ರೀತಿಯಲ್ಲಿ ರಜತ್ ಅವರು ‘ಅಲ್ಲ’ ಎಂದು ಉತ್ತರ ನೀಡಿದರು. ಇದು ನಿಜವಾಗಿಯೂ ಎಲ್ಲರಿಗೂ ಅಚ್ಚರಿ ಎನಿಸಿತು. ಸುದೀಪ್ ಕೂಡ ಅಚ್ಚರಿಪಟ್ಟರು. ತಮ್ಮ ಮಾತಿಗೆ ಕಾರಣ ಏನು ಎಂಬುದನ್ನು ಕೂಡ ರಜತ್ ಅವರು ವಿವರಿಸಿದ್ದಾರೆ.

ಚೈತ್ರಾ ಕುಂದಾಪುರ ಅವರಿಗೆ ಬಿಗ್​ ಬಾಸ್ ಆಟ ಎಲ್ಲರಿಗಿಂತ ಚೆನ್ನಾಗಿ ಅರ್ಥ ಆಗಿದೆ ಎಂದು ರಜತ್ ಅಭಿಪ್ರಾಯಪಟ್ಟಿದ್ದಾರೆ. ಭಾನುವಾರದ (ಜನವರಿ 5) ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್​ ಅವರು ನಡೆಸಿದ ‘ಯೆಸ್​ ಅಥವಾ ನೋ’ ರೌಂಡ್​ನಲ್ಲಿ ಚೈತ್ರಾ ಬಗ್ಗೆ ಚರ್ಚೆ ಆಗಿದೆ. ಚೈತ್ರಾ ಬಗ್ಗೆ ರಜತ್ ಅವರು ಹೇಳಿದ್ದನ್ನು ಕೇಳಿ ಸುದೀಪ್​ ಅವರಿಗೂ ಆಶ್ಚರ್ಯ ಆಯಿತು. ಮೊದಲಿನಿಂದಲೂ ರಜತ್ ಮತ್ತು ಚೈತ್ರಾ ಹಾವು-ಮುಂಗುಸಿ ರೀತಿ ಆಡುತ್ತಿದ್ದಾರೆ. ಆದರೆ ಹೆಚ್ಚು ತಮಾಷೆ ಮಾಡಿಕೊಳ್ಳುವುದು ಕೂಡ ಅವರೇ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More