ಇನ್ಮುಂದೆ ಕಾಲುಂಗರ ಹಾಕಿಕೊಳ್ಳಲಿದ್ದಾರೆ ರಜತ್; ಕಾರಣ ಏನು?
ರಿಯಾಲಿಟಿ ಶೋಗಳ ಮೂಲಕ ಫೇಮಸ್ ಆದವರು ರಜತ್. ಅವರು ಈ ಮೊದಲು ಬಿಗ್ ಬಾಸ್ ಮೂಲಕ ಜನಪ್ರಿಯತೆ ಪಡೆದರು. ಈಗ ರಜತ್ ಅವರು ಕಾಲುಂಗರ ಹಾಕಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಮೂಲಕ ರಜತ್ ಫೇಮಸ್ ಆಗಿದ್ದಾರೆ. ಈಗ ಅವರು ಜೀ ಕನ್ನಡದ (Zee Kannada) ‘ನಾವು ನಮ್ಮವರು’ ರಿಯಾಲಿಟಿ ಶೋಗೆ ಆಗಮಿಸಿದ್ದಾರೆ. ಈ ಶೋನಲ್ಲಿ ಅವರು ಪತ್ನಿ ಎದುರು ಒಂದು ಶಪಥ ಮಾಡಿದ್ದಾರೆ. ‘ನನಗೆ ಅವಳು ಕಾಲುಂಗರ ಹಾಕಬೇಕು. ಯಾರಾದರು ಹುಡುಗೀರು ನನ್ನ ನೋಡಿದರೆ ನಾನು ಅಕ್ಷಿತಾಳ ಪ್ರಾಪರ್ಟಿ ಎಂಬುದು ಗೊತ್ತಾಗಬೇಕು’ ಎಂದಿದ್ದಾರೆ ರಜತ್. ರಜತ್ಗೆ ಅಕ್ಷಿತಾ ಕಾಲುಂಗರ ಹಾಕಿರುವ ವಿಡಿಯೋ ಸದ್ಯ ಗಮನ ಸೆಳೆದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos

