ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್

Edited By:

Updated on: Dec 22, 2025 | 8:38 PM

ಇಷ್ಟು ದಿನ ಅತಿಥಿಯಾಗಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಜತ್ ಅವರು ಈಗ ಹೊರಗೆ ಬಂದಿದ್ದಾರೆ. ಟಿವಿ9 ಜೊತೆ ಮಾತನಾಡಿ ಅವರು ಅಸಲಿ ವಿಷಯ ತೆರೆದಿಟ್ಟಿದ್ದಾರೆ. ‘ಗಿಲ್ಲಿಯನ್ನು ರಕ್ಷಿತಾ ಇಷ್ಟಪಡುತ್ತಿಲ್ಲ. ಅವವನ್ನು ಬ್ರೋ ಅಂತ ಅವಳು ಕರೆಯುತ್ತಾಳೆ. ನಾನು ಅದನ್ನು ನೋಡಿದ್ದೇನೆ’ ಎಂದು ರಜತ್ ಹೇಳಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ಅವರ ಜೊತೆ ಕಾವ್ಯಾ ಶೈವ ಮತ್ತು ಸ್ಪಂದನಾ ಅವರು ಇದ್ದಾಗ ರಕ್ಷಿತಾ ಶೆಟ್ಟಿ (Rakshitha Shetty) ಸಹಿಸಿಕೊಳ್ಳುವುದಿಲ್ಲ ಎನಿಸುತ್ತದೆ. ಗಿಲ್ಲಿ ಮೇಲೆ ಅವರಿಗೆ ಪೊಸೆಸಿವ್​ನೆಸ್ ಇರಬಹುದು ಎಂಬ ಅನುಮಾನ ಕೂಡ ಮೂಡುತ್ತದೆ. ಆ ಬಗ್ಗೆ ರಜತ್ ಅವರಿಗೆ ಪ್ರಶ್ನೆ ಕೇಳಲಾಯಿತು. ಇಷ್ಟು ದಿನ ಅತಿಥಿಯಾಗಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಜತ್ (Rajath Kishan) ಅವರು ಈಗ ಹೊರಗೆ ಬಂದಿದ್ದಾರೆ. ಟಿವಿ9 ಜೊತೆ ಮಾತನಾಡಿ ಅವರು ಅಸಲಿ ವಿಷಯ ತೆರೆದಿಟ್ಟಿದ್ದಾರೆ. ‘ಗಿಲ್ಲಿಯನ್ನು ರಕ್ಷಿತಾ ಇಷ್ಟಪಡುತ್ತಿಲ್ಲ. ಅವವನ್ನು ಬ್ರೋ ಅಂತ ಅವಳು ಕರೆಯುತ್ತಾಳೆ. ನಾನು ಅದನ್ನು ನೋಡಿದ್ದೇನೆ. ಪೊಸೆಸಿವ್ ಆಗುವ ಅವಶ್ಯಕತೆ ಇಲ್ಲ. ರಕ್ಷಿತಾ ತುಂಬಾ ಮುಗ್ಧೆ. ಅವಳು ತುಂಬಾ ಒಳ್ಳೆಯ ಹುಡುಗಿ. ಅವಳು ಗೆದ್ದರೆ ನಾನೇ ಪಟಾಕಿ ಹೊಡೆಯುತ್ತೇನೆ. ಕೋಪ ಬಂದರೆ ಅವಳು ಮನುಷ್ಯಳೇ ಅಲ್ಲ. ಕಾವ್ಯ ಮತ್ತು ಸ್ಪಂದನಾ ಎಲ್ಲೋ ಟ್ರಿಗರ್ ಮಾಡುತ್ತಾರೆ’ ಎಂದು ರಜತ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.