ಎಸ್ಪಿಬಿ ಮಗ ಚರಣ್ಗೆ ನನ್ನ ಕಂಡರೆ ಅಸೂಯೆ; ರಾಜೇಶ್ ಕೃಷ್ಣನ್
ಎಸ್.ಪಿ ಬಾಲ ಸುಬ್ರಹ್ಮಣ್ಯಂ ಅವರ ಮಗ ಚರಣ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಅವರು ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಆಗಮಿಸಿದ್ದಾರೆ. ಇಬ್ಬರಿಗೂ ಅಭಿಮಾನಿ ಬಳಗ ದೊಡ್ಡದೇ ಇದೆ.
ಎಸ್.ಪಿ ಬಾಲ ಸುಬ್ರಹ್ಮಣ್ಯಂ ಅವರ ಮಗ ಚರಣ್ ಹಾಗೂ ಗಾಯಕ ರಾಜೇಶ್ ಕೃಷ್ಣನ್ ಅವರು ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಆಗಮಿಸಿದ್ದಾರೆ. ಇಬ್ಬರಿಗೂ ಅಭಿಮಾನಿ ಬಳಗ ದೊಡ್ಡದೇ ಇದೆ. ಇಬ್ಬರ ಗಾಯನವೂ ಅದ್ಭುತವೇ. ಆದರೆ, ರಾಜೇಶ್ ಕೃಷ್ಣನ್ ಅವರನ್ನು ಕಂಡರೆ ಚರಣ್ಗೆ ಅಸೂಯೆ. ಇದನ್ನು ಸ್ವತಃ ರಾಜೇಶ್ ಕೃಷ್ಣನ್ ಅವರೇ ಹೇಳಿಕೊಂಡಿದ್ದಾರೆ.
ರಾಜೇಶ್ ಕೃಷ್ಣನ್ ಒಮ್ಮೆ ಚರಣ್ ಜೊತೆ ಮಾತನಾಡುತ್ತಿದ್ದರು. ಈ ವೇಳೆ ರಾಜೇಶ್ ‘ನಿಮ್ಮನ್ನು ನೋಡಿದರೆ ನನಗೆ ಅಸೂಯೆ ಆಗುತ್ತದೆ. ನೀವು ನಿತ್ಯ ಎಸ್ಪಿಬಿ ನೋಡಬಹುದು’ ಎಂದು ಚರಣ್ಗೆ ಹೇಳಿದ್ದರು. ಇದಕ್ಕೆ ಉತ್ತರಿಸಿದ್ದ ಚರಣ್ ‘ನನಗೆ ನಿಮ್ಮನ್ನು ನೋಡಿದರೆ ಅಸೂಯೆ ಆಗುತ್ತದೆ. ಏಕೆಂದರೆ ಬೆಳಗ್ಗೆ ತಿಂಡಿಗೆ ಕೂತಾಗೆಲ್ಲ ನಮ್ಮ ತಂದೆ ನಿಮ್ಮ ಬಗ್ಗೆ ಹೇಳುತ್ತಿದ್ದರು’ ಎಂದು ರಾಜೇಶ್ಗೆ ಹೇಳಿದ್ದಾರೆ. ಈ ಕುರಿತು ಅವರು ಟಿವಿ9 ಕನ್ನಡದ ಜತೆ ಮಾತನಾಡಿದ್ದಾರೆ.
ಇದನ್ನೂ ಓದಿ: ಎಸ್.ಪಿ. ಬಾಲಸುಬ್ರಹ್ಮಣ್ಯಂ ನೆನೆದು ಹಾಡುವಾಗಲೇ ಕಣ್ಣೀರಿಟ್ಟ ರಾಜೇಶ್ ಕೃಷ್ಣನ್
Published on: Sep 08, 2021 03:34 PM