My India My Life Goals: ರಾಜೇಶ್ ಶುಕ್ಲಾ ಗಂಗಾ ನದಿಯ ದಡಗಳನ್ನು ಸ್ವಚ್ಛಗೊಳಿಸುತ್ತಾ ಪರಿಸರವನ್ನು ಮಾಲಿನ್ಯ ಮುಕ್ತವಾಗಿಟ್ಟುಕೊಳ್ಳುವ ಜಾಗೃತಿ ಮೂಡಿಸುತ್ತಾರೆ!

|

Updated on: Jul 17, 2023 | 4:43 PM

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ನಾವೆಲ್ಲ ಭಾರತೀಯರು ಪರಿಸರವನ್ನು ಶುದ್ಧವಾಗಿಟ್ಟು ಆರೋಗ್ಯವಂತ ರಾಷ್ಟ್ರವನ್ನು ನಿರ್ಮಿಸೋಣ ಎಂದು ಅವರು ಜನರಿಗೆ ಪ್ರತಿದಿನ ಹೇಳುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.

ವಿಡಿಯೋದಲ್ಲಿ ಸ್ಕೂಟರ್ ಓಡಿಸಿಕೊಂಡು ಹೊಗ್ತಾ ಇದ್ದಾರಲ್ಲ, ಅವರು ಹೆಸರು ರಾಜೇಶ್ ಶುಕ್ಲಾ (Rajesh Shukla) ಅಂತ, ಅವರು ಹೆಸರಾಂತ ವ್ಯಕ್ತಿಯೇನೂ ಅಲ್ಲ ಆದರೆ ಅವರು ಮಾಡುವ ಕೆಲಸ ಹೆಸರಾಂತ ವ್ಯಕ್ತಿಗಳೂ ಮಾಡೋದಿಲ್ಲ ಮಾರಾಯ್ರೇ. ರಾಜೇಶ್ ಬೆಳಗ್ಗೆ 5 ಗಂಟೆಗೆ ಮನೆಯಿಂದ ಹೊರಟು ಪ್ರತಿದಿನ ಪವಿತ್ರ ಗಂಗಾ ನದಿಯ (River Ganges) ದಡಗಳನ್ನು ತಮ್ಮ ತಂಡದ ಸದಸ್ಯರೊಂದಿಗೆ ಸ್ವಚ್ಛಗೊಳಿಸುತ್ತಾರೆ. ಅವರೇ ಹೇಳುವ ಹಾಗೆ ಸುಮಾರು ಮೂರು ಗಂಟೆಗಳ ಕಾಲ ನದಿ ದಡವನ್ನು (River shores) ಸ್ವಚ್ಛಗೊಳಿಸುತ್ತಾರೆ ಮತ್ತು ಇದು ಅವರ ದಿನಚರಿಯಾಗಿ ಮಾರ್ಪಟ್ಟಿದೆ. ಸ್ವಚ್ಛತಾ ಕಾರ್ಯದ ಬಳಿಕ ನದಿಯಲ್ಲಿ ಪವಿತ್ರ ಸ್ನಾನ ಮತ್ತು ಪೂಜೆಗೆ ಬರುವ ಜನರಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾರೆ. ನದಿಯಲ್ಲಿ ಪಾಲಿಥೀನ್ಮ ಪ್ಲಾಸ್ಟಿಕ್ ಬ್ಯಾಗ್ ಗಳು, ಕಸಕಡ್ಡಿ ಮುಂತಾದವುಗಳನ್ನು ಬಿಸಾಡಬೇಡಿ, ಅದು ಪರಿಸರಕ್ಕೆ ಮಾರಕ ಎಂದು ಮೈಕ್ ಮೂಲಕ ಸಾರುತ್ತಾ ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಾರೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿರುವ ನಾವೆಲ್ಲ ಭಾರತೀಯರು ಪರಿಸರವನ್ನು ಶುದ್ಧವಾಗಿಟ್ಟು ಆರೋಗ್ಯವಂತ ರಾಷ್ಟ್ರವನ್ನು ನಿರ್ಮಿಸೋಣ ಎಂದು ಅವರು ಜನರಿಗೆ ಪ್ರತಿದಿನ ಹೇಳುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ