ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ರಜನೀಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಇಂದು ಬಿಡುಗಡೆ ಆಗಿದ್ದು, ಅವರ ಆತ್ಮೀಯ ಗೆಳೆಯರ ಬಹದ್ಧೂರ್ ಇಂದು ಮೊದಲ ಶೋ ನೋಡಿ, ಟಿವಿ9 ಜೊತೆ ಮಾತನಾಡಿದ್ದಾರೆ. ಇನ್ನು ಕೆಲ ವರ್ಷದ ಬಳಿಕ ನಾಯಕನಾಗಿ ನಟಿಸುವುದಿಲ್ಲ ರಜನಿ ಎಂದಿದ್ದಾರೆ.
ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ‘ವೆಟ್ಟೈಯಾನ್’ ಸಿನಿಮಾ ಇಂದು (ಅಕ್ಟೋಬರ್ 10) ಬಿಡುಗಡೆ ಆಗಿದೆ. ಸಿನಿಮಾದಲ್ಲಿ ರಜನೀಕಾಂತ್ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಬಿಡುಗಡೆ ಆಗಿದೆ. ಮೊದಲ ದಿನವೇ ರಜನೀಕಾಂತ್ರ ಅಭಿಮಾನಿಗಳು ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ರಜನೀಕಾಂತ್ರ ಆತ್ಮೀಯ ಗೆಳೆಯ ಬಹದ್ಧೂರ್ ಸಹ ಇಂದು ಬೆಂಗಳೂರಿನಲ್ಲಿ ಮೊದಲ ದಿನವೇ ರಜನೀಕಾಂತ್ರ ‘ವೆಟ್ಟೈಯಾನ್’ ಸಿನಿಮಾ ನೋಡಿದರು. ಸಿನಿಮಾ ನೋಡಿ ಬಂದು ಟಿವಿ9 ಜೊತೆ ಮಾತನಾಡಿದ ಬಹದ್ಧೂರ್, ರಜನೀಕಾಂತ್ ವೃತ್ತಿ ಜೀವನದ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 10, 2024 06:37 PM