ಮೈಸೂರು ಅರಮನೆ ಆವರಣದಲ್ಲಿ ಆಯುಧ ಪೂಜೆ; ಬಾಲ್ಕನಿಯಲ್ಲಿ ಮೊಮ್ಮಗನೊಂದಿಗೆ ನಿಂತು ನೋಡುತ್ತಾ ಸಂಭ್ರಮಿಸಿದ ಪ್ರಮೋದಾ ದೇವಿ

ಮೈಸೂರು ಅರಮನೆ ಆವರಣದಲ್ಲಿ ಆಯುಧ ಪೂಜೆ; ಬಾಲ್ಕನಿಯಲ್ಲಿ ಮೊಮ್ಮಗನೊಂದಿಗೆ ನಿಂತು ನೋಡುತ್ತಾ ಸಂಭ್ರಮಿಸಿದ ಪ್ರಮೋದಾ ದೇವಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 04, 2022 | 1:43 PM

ಎಲ್ಲ ಪೂಜಾವಿಧಿಗಳನ್ನು ರಾಜಮಾತೆ ಪ್ರಮೋದಾ ದೇವಿಯವರು ಮೊಮ್ಮಗನೊಂದಿಗೆ ಬಾಲ್ಕನಿಯಲ್ಲಿ ನಿಂತು ನೋಡುತ್ತಾ ಸಂಭ್ರಮಿಸಿದರು.

ಮೈಸೂರಲ್ಲಿ ಹಿಂದಿನ ಒಡೆಯರ್ (Wadiyar) ಅರಸೊತ್ತಿಗೆಯ ಮನೆತನ ಮತ್ತು ಅರಮನೆ ಆವರಣದಲ್ಲಿ ದಸರಾ ಹಬ್ಬದ ಸಂಭ್ರಮ ಅದ್ದೂರಿ ಮತ್ತು ಸಕಲ ಸಂಪ್ರದಾಯ, ಪದ್ಧತಿಗಳ ಪ್ರಕಾರ ನಡೆಯುತ್ತಿದೆ. ಒಡೆಯರ್ ರಾಜಮನೆತನದ ಯದುವೀರ್ (Yaduveer) ಅವರು ಸವಾರಿ ತೊಟ್ಟಿಯಲ್ಲಿ ಆಯುಧ ಪೂಜೆ ನೆರವೇರಿಸಿದರು. ಅವರು ಆನೆ, ಹಸುಗಳಿಗೆ ಮತ್ತು ವಾಹನಗಳಿಗೆ ಪೂಜೆ ಮಾಡುವಾಗ ಹಿನ್ನೆಲೆಯಲ್ಲಿ ಪೊಲೀಸ್ ಬ್ಯಾಂಡ್ ಮೊಳಗುತಿತ್ತು. ಎಲ್ಲ ಪೂಜಾವಿಧಿಗಳನ್ನು ರಾಜಮಾತೆ ಪ್ರಮೋದಾ ದೇವಿಯವರು (Pramoda Devi) ಮೊಮ್ಮಗನೊಂದಿಗೆ ಬಾಲ್ಕನಿಯಲ್ಲಿ ನಿಂತು ನೋಡುತ್ತಾ ಸಂಭ್ರಮಿಸಿದರು.