Raju Talikote: ಹೃದಯಾಘಾತ ಆಗಿದ್ದು 2ನೇ ಬಾರಿ; ವಿವರ ನೀಡಿದ ರಾಜು ತಾಳಿಕೋಟೆ ಪುತ್ರ

Updated on: Oct 13, 2025 | 10:39 PM

ಧಾರವಾಡ ರಂಗಾಯಣದ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ನಟ ರಾಜು ತಾಳಿಕೋಟೆ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ. ಅವರ ಪುತ್ರ ಭರತ್ ತಾಳಿಕೋಟೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಕೂಡ ರಾಜು ತಾಳಿಕೋಟೆ ಅವರಿಗೆ ಹೃದಯಾಘಾತ ಆಗಿತ್ತು. ಆಗ ಚಿಕಿತ್ಸೆ ಅವರಿಗೆ ಕೊಡಿಸಲಾಗಿತ್ತು.

ಧಾರವಾಡ ರಂಗಾಯಣದ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದ ನಟ ರಾಜು ತಾಳಿಕೋಟೆ (Raju Talikote) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಮಗ ಭರತ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೊದಲು ಕೂಡ ರಾಜು ತಾಳಿಕೋಟೆ ಅವರಿಗೆ ಹೃದಯಾಘಾತ (Heart Attack) ಆಗಿತ್ತು. ಆಗ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಈಗ ಹಾರ್ಟ್​ ಅಟ್ಯಾಕ್ ಆಗಿದ್ದು, ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಚಿಕ್ಕ ಸಿಂದಗಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಇಬ್ಬರು ಪತ್ನಿಯರು, ಇಬ್ಬರು ಗಂಡು ಮಕ್ಕಳು, ಮೂರು ಹೆಣ್ಣು ಮಕ್ಕಳನ್ನು ರಾಜು ತಾಳಿಕೋಟೆ ಅವರು ಅಗಲಿದ್ದಾರೆ. ‘ನಮ್ಮ ತಂದೆಗೆ ಇಬ್ಬರು ಪತ್ನಿಯರು. ನಾವೆಲ್ಲರೂ ಅನ್ಯೂನ್ಯವಾಗಿ ಬೆಳೆದಿದ್ದೇವೆ’ ಎಂದು ಭರತ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Oct 13, 2025 09:30 PM