ಸಿಡಿ ಫ್ಯಾಕ್ಟರಿ ಯಾರು ನಡೆಸುತ್ತಾರೆ ಅಂತ ರಾಜುಗೌಡ ತಮ್ಮ ಪಕ್ಷದ ಶಾಸಕ ಯತ್ನಾಳ್ ರನ್ನು ಕೇಳಲಿ: ಪ್ರಿಯಾಂಕ್ ಖರ್ಗೆ

|

Updated on: May 03, 2024 | 6:48 PM

ಮೊದಲು ಮಾತಾಡಿದ ಖರ್ಗೆ, ರಾಜುಗೌಡ ಅವರಿವರ ಮೇಲೆ ಆರೋಪಗಳನ್ನು ಮಾಡುವ ಬದಲು ಸಿಡಿ ಫ್ಯಾಕ್ಟರಿ ಎಲ್ಲಿದೆ ಯಾರು ನಡೆಸುತ್ತಾರೆ ಅಂತ ಅವರ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೇಳಲಿ, ಅವರಿಗೆ ಗೊತ್ತಿದೆ ಮತ್ತು ಇದಕ್ಕೂ ಮೊದಲು ಅದರ ಬಗ್ಗೆ ಹೇಳಿದ್ದಾರೆ ಎಂದು ಹೇಳಿದರು.

ಕಲಬುರಗಿ: ನಿನ್ನೆ ಯಾದಗಿರಿಯಲ್ಲಿ ಮಾಜಿ ಶಾಸಕ ನರಸಿಂಹ ನಾಯಕ್ (ರಾಜುಗೌಡ) (Rajugouda) ಸುದ್ದಿಗಾರರೊಂದಿಗೆ ಮಾತಾಡುವಾಗ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಸಿಡಿ ತಯಾರು ಮಾಡುವ ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ, ಯೂನಿವರ್ಸಿಟಿ ನಡೆಸುತ್ತಾರೆ ಅಂತ ಹೇಳಿದ್ದರು. ಕಲಬುರಗಿಯಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಕಾಂಗ್ರೆಸ್ ನಾಯಕರಾದ ಪ್ರಿಯಾಂಕ್ ಖರ್ಗೆ (Priyank Kharge), ಡಾ ಶರಣಪ್ರಕಾಶ್ ಪಾಟೀಲ್ (Dr Sharan Prakash Patil ) ಮೊದಲಾದವರು ರಾಜುಗೌಡ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ಮೊದಲು ಮಾತಾಡಿದ ಖರ್ಗೆ, ರಾಜುಗೌಡ ಅವರಿವರ ಮೇಲೆ ಆರೋಪಗಳನ್ನು ಮಾಡುವ ಬದಲು ಸಿಡಿ ಫ್ಯಾಕ್ಟರಿ ಎಲ್ಲಿದೆ ಯಾರು ನಡೆಸುತ್ತಾರೆ ಅಂತ ಅವರ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಕೇಳಲಿ, ಅವರಿಗೆ ಗೊತ್ತಿದೆ ಮತ್ತು ಇದಕ್ಕೂ ಮೊದಲು ಅದರ ಬಗ್ಗೆ ಹೇಳಿದ್ದಾರೆ ಎಂದು ಹೇಳಿದರು. ಅವರಿಂದ ಮೈಕ್ ಇಸಿದುಕೊಂಡು ಮಾತಾಡಿದ ಡಾ ಪಾಟೀಲ್, ಒಬ್ಬ ರಾಜಕಾರಣಿಯಾಗಿ ರಾಜುಗೌಡ ಹೀಗೆಲ್ಲ ಮಾತಾಡಬಾರದು, ಜನರ ಮುಂದೆ ಕ್ರೆಡಿಬಿಲಿಟಿ ಇಲ್ಲದಂತಾಗುತ್ತದೆ ಅವರು ನಮ್ಮನ್ನು ಅಗ್ಗವಾಗಿ ನೋಡಲಾರಂಭಿಸುತ್ತಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಯಾರಾದರೂ ಪಾಕ್​ ಜಿಂದಾಬಾದ್​ ಅಂದ್ರೆ ಹೇಳಿ, ನಾವೇ ಗುಂಡಿಕ್ಕಿ ಸಾಯಿಸ್ತೇವೆ: ಸಚಿವ ಜಮೀರ್