ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ

Edited By:

Updated on: May 12, 2025 | 4:25 PM

‘ಕಾಂತಾರ’ ಪ್ರೀಕ್ವೆಲ್​ನಲ್ಲಿ ರಾಕೇಶ್ ಪೂಜಾರಿ ಅವರು ನಟಿಸುತ್ತಿದ್ದರು. ‘ರಾಕೇಶ್ ಬಗ್ಗೆ ಯಾರಿಗೂ ಹೊಟ್ಟೆಕಿಚ್ಚು ಇರಲಿಲ್ಲ. ಎಲ್ಲರಿಗೂ ಅವರು ಮುದ್ದಿನ ಕಂದನಾಗಿದ್ದರು. ಕಾಮಿಡಿ ಕಿಲಾಡಿಗಳು ಶೋನಲ್ಲಿ ಎಲ್ಲರೂ ಅವರನ್ನು ಪ್ರೀತಿಸುತ್ತಿದ್ದರು. ಅವರಿಗೆ ಅವಕಾಶ ಸಿಕ್ಕರೆ ಎಲ್ಲರೂ ಖುಷಿಪಡುತ್ತಿದ್ದರು’ ಎಂದು ಗೋವಿಂದೇ ಗೌಡ ಹೇಳಿದ್ದಾರೆ.

ಕಾಮಿಡಿ ಕಿಲಾಡಿಗಳು (Comedy Khiladigalu) ಖ್ಯಾತಿಯ ನಟ ರಾಕೇಶ್ ಪೂಜಾರಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ಘಟನೆಯಿಂದ ಇಡೀ ಚಿತ್ರತಂಡಕ್ಕೆ ಶಾಕ್ ಆಗಿದೆ. ರಾಕೇಶ್ ಪೂಜಾರಿ (Rakesh Poojari) ಜೊತೆ ನಟ ಗೋವಿಂದೇ ಗೌಡ ಅವರು ಆಪ್ತರಾಗಿದ್ದಾರೆ. ಅಗಲಿದ ಗೆಳೆಯನ ಬಗ್ಗೆ ಗೋವಿಂದೇ ಗೌಡ ಅವರು ಟಿವಿ9 ಜೊತೆ ಮಾತನಾಡಿದ್ದಾರೆ. ‘ನಾವೆಲ್ಲ ಒಟ್ಟಿಗೆ ಇದ್ದವರು. ಕಲಾವಿದನಾಗಿ ಹಾಗೂ ವ್ಯಕ್ತಿಯಾಗಿ ಇಷ್ಟ ಆಗುತ್ತಿದ್ದರು. ನಮ್ಮ ಕುಟುಂಬದ ಸದಸ್ಯನ ರೀತಿ ಇದ್ದರು. ಅಂಥ ವ್ಯಕ್ತಿ ಸಿಗುವುದು ಕಷ್ಟ. ಅವರ ಸ್ನೇಹ ನಮಗೆ ಸಿಕ್ಕಿದ್ದು ಅದೃಷ್ಟ. ಅವರ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ’ ಎಂದು ಗೋವಿಂದೇ ಗೌಡ (Govinde Gowda) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More