ತುಂಬ ಆ್ಯಕ್ಟೀವ್ ಆಗಿದ್ದ ರಾಕೇಶ್​ಗೆ ಹೃದಯಾಘಾತ, ನಂಬೋಕೆ ಆಗಲಿಲ್ಲ: ರಘು

Edited By:

Updated on: May 14, 2025 | 10:55 PM

‘ಕಾಮಿಡಿ ಕಿಲಾಡಿಗಳು’ ಮೂಲಕ ಫೇಮಸ್ ಆಗಿದ್ದ ನಟ ರಾಕೇಶ್ ಪೂಜಾರಿ ನಿಧನದಿಂದ ಆಪ್ತರಿಗೆ ಹಾಗೂ ಅಭಿಮಾನಿಗಳಿಗೆ ತುಂಬಾ ನೋವಾಗಿದೆ. ರಾಕೇಶ್ ಜತೆಗಿನ ಒಡನಾಟವನ್ನು ಸ್ನೇಹಿತ ಸೀರುಂಡೆ ರಘು ಅವರು ನೆನಪಿಸಿಕೊಂಡಿದ್ದಾರೆ. ರಾಕೇಶ್​ ಅವರಿಗೆ ಹೃದಯಾಘಾತ ಆಗಿದೆ ಎಂದಾಗ ನಂಬಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದ್ದಾರೆ.

ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ (Rakesh Poojary) ನಿಧನದಿಂದ ಆಪ್ತರಿಗೆ ಮತ್ತು ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ರಾಕೇಶ್ ಜೊತೆಗಿನ ಒಡನಾಟವನ್ನು ಸ್ನೇಹಿತರು ನೆನಪಿಸಿಕೊಳ್ಳುತ್ತಿದ್ದಾರೆ. ‘ರಾಕೇಶ್​ಗೆ ತುಂಬ ಎನರ್ಜಿ ಇತ್ತು. ಸದಾ ಆ್ಯಕ್ಟೀವ್ ಆಗಿ ಇರುತ್ತಿದ್ದ. ಅವನಿಗೆ ಹಾರ್ಟ್​ ಅಟ್ಯಾಕ್ ಆಯ್ತು ಎಂದರೆ ನಂಬೋಕೆ ಆಗಲಿಲ್ಲ. ಮೊದಲೆಲ್ಲ ವಯಸ್ಸಾದವರಿಗೆ ಹೃದಯಾಘಾತ (Heart Attack) ಆಗುತ್ತಿತ್ತು. ಈಗ 33 ವರ್ಷದವರಿಗೆ ಈ ರೀತಿ ಆಗಿದೆ. ಎಲ್ಲರನ್ನೂ ರಾಕೇಶ್ ನಗಿಸುತ್ತಿದ್ದ. ಈಗ ನಮ್ಮನ್ನೆಲ್ಲ ಬಿಟ್ಟು ಹೊರಟು ಹೋದ. ಅವನ ಜೊತೆ ಆಪ್ತವಾಗಿದ್ದವರಿಗೆ ಎಷ್ಟು ನೋವಾಗಿರಬಹುದು. ಅದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ’ ಎಂದು ಸೀರುಂಡೆ ರಘು (Seerunde Raghu) ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಂಗಳ ರಾಜ್

ಮಂಗಳ ರಾಜ್ ಮೂಲತಃ ಮಧುಗಿರಿ ಬಳಿಯ ರತ್ನಗಿರಿ ರಂಗಾಪುರದವರು. ಇವರು ಸುದ್ದಿ ಮಧ್ಯಮಕ್ಕೆ ಕಾಲಿಟ್ಟು 13 ವರ್ಷಗಳಾಗಿವೆ. ಈಟಿವಿಯಲ್ಲಿ ಇಂಟರ್​ನ್​ಶಿಪ್​ , ಮಧ್ಯಮದ ಅ, ಆ ಇ ಈ ಕಲಿತಿದ್ದು ಕಸ್ತೂರಿ ನ್ಯೂಸ್ 24 ನಲ್ಲಿ ನಂತ್ರ ರಾಜ್ ನ್ಯೂಸ್, ದಿಗ್ವಿಜಯ ನ್ಯೂಸ್ ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. 2021ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮುಂದುವರಿಸಿದ್ದಾರೆ. ಸಿನಿಮಾ ಅಂದ್ರೆ ಬಾಲ್ಯದಿಂದಲೂ ಹುಚ್ಚು. ಅರಸಿ ಬಂದಿದ್ದು ಸಿನಿಮಾ ಜರ್ನಲಿಸ್ಟ್ ಕೆಲಸ. ಸಿನಿಮಾ ಸುದ್ದಿಗಳ ಕವರೇಜ್, ಸಿನಿಮಾ ಹಾಗೂ ಸಿನಿಮಾ ಮಂದಿಯ ವಿವಾದಗಳು, ವಿಮರ್ಶೆ, ಸಿನಿಮಾದವರ ಸಾವು ನೋವು ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವುಗಳ ವರದಿಗಾರಿಕೆ ಇವರ ಕಾಯಕ. ಸಿನಿಮಾ ನೋಡುವುದೇ ಎಲ್ಲಾ ಆಸಕ್ತಿಗಳಿಗಿಂತ ಹೆಚ್ಚು ಆಸಕ್ತಿ.

Read More