ಪ್ರಾಯಶಃ ರಕ್ಷಣೆ ಕೇಳಲು ರಾಕೀ ರೈ ಡಿಸಿಎಂ ಶಿವಕುಮಾರ್​ರನ್ನು ಭೇಟಿಯಾಗಿರಬಹುದು: ರಿಕ್ಕಿ ರೈ ವಕೀಲ

Updated on: Apr 22, 2025 | 6:05 PM

ಇದುವರೆಗೆ ತಾವು ಯಾರನ್ನೂ ಅಪರಾಧಿಗಳು ಅಂತ ಹೇಳಿಲ್ಲ, ಕೆಲವರ ಮೇಲೆ ಸಂಶಯ ಇರೋದನ್ನು ಮಾತ್ರ ಪೊಲೀಸರಿಗೆ ಹೇಳಿದ್ದೇವೆ, ಅವರೆಲ್ಲ ಅರೋಪಿಗಳೇ ಹೊರತು ಅವರಿಂದಲೇ ಕೊಲೆ ನಡೆದಿದೆ ಅಂತ ಯಾವತ್ತೂ ಹೇಳಿಲ್ಲ ಎಂದು ವಕೀಲ ಹೇಳಿದರು. ಶುಕ್ರವಾರ ಮಧ್ಯರಾತ್ರಿಯ ನಂತರ ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆದಿದ್ದು ಅವರು ಖಾಸಗಿ ಅಸ್ಪತ್ರೆಯೊಂದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಮನಗರ, ಏಪ್ರಿಲ್ 22: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುತ್ತಪ್ಪ ರೈ ಮಗ ರಿಕ್ಕಿ ರೈ ಅವರ ವಕೀಲ ದಿವಂಗತ ಡಾನ್​ನ ಮತ್ತೊಬ್ಬ ಮಗ ರಾಕಿ ರೈ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DCM DK Shivakumar) ಅವರನ್ನು ಭೇಟಿ ಮಾಡಿರುವ ವಿಷಯ ತನಗೆ ಗೊತ್ತಿಲ್ಲ ಎಂದು ಹೇಳಿದರು. ಮೊದಲು ರಾಕಿ ರೈಯನ್ನು ರಿಕ್ಕಿ ರೈಗೆ ಕನ್ಪ್ಯೂಸ್ ಮಾಡಿಕೊಳ್ಳುವ ವಕೀಲ ನಂತರ ಗ್ರಹಿಕೆಯನ್ನು ಸರಿಮಾಡಿಕೊಂಡು, ಶಿವಕುಮಾರ್ ರಾಜ್ಯದ ಡಿಸಿಎಂ ಆಗಿದ್ದಾರೆ, ರಾಕಿ ರಕ್ಷಣೆ ಕೇಳಲು ಹೋಗಿರಬಹುದು ಎಂದು ಹೇಳಿದರು.

ಇದನ್ನೂ ಓದಿ:  ರಿಕ್ಕಿ ರೈ ಮೂಗಿಗೆ ಗುಂಡು ತಾಕಿದೆ, ಮಾತಾಡಿದರೆ ರಕ್ತ ಬರುತ್ತಿದೆ: ಜಗದೀಶ್, ಜಯ ಕರ್ನಾಟಕ ಸಂಘಟನೆ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ