ಕಾಂಪ್ರಮೈಸ್ ಮಾತೆ​ ಇಲ್ಲ, ಇನ್ನೇನಿದ್ದರೂ ಹೋರಾಟವೇ: ರಕ್ಷಿತ್ ಶೆಟ್ಟಿ

|

Updated on: Aug 02, 2024 | 4:42 PM

ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಮೇಲೆ ಎಂಆರ್​ಟಿ ಆಡಿಯೋ ಸಂಸ್ಥೆ ಹಕ್ಕುಚ್ಯುತಿ ಉಲ್ಲಂಘನೆ ಪ್ರಕರಣ ದಾಖಲಿಸಿದೆ. ಇಂದು ವಿಚಾರಣೆಗೆ ಹಾಜರಾಗಿದ್ದ ರಕ್ಷಿತ್ ಶೆಟ್ಟಿ, ಪ್ರಕರಣ ಕುರಿತು ನ್ಯಾಯಾಲಯದಲ್ಲಿಯೇ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರುವ ‘ಬ್ಯಾಚುಲರ್ಸ್ ಪಾರ್ಟಿ’ ಸಿನಿಮಾದ ಮೇಲೆ ಎಂಆರ್​ಟಿ ಆಡಿಯೋ ಸಂಸ್ಥೆ ಹಕ್ಕುಚ್ಯುತಿ ಉಲ್ಲಂಘನೆ ಪ್ರಕರಣ ದಾಖಲಿಸಿದ್ದು, ನಟ ರಕ್ಷಿತ್ ಶೆಟ್ಟಿ ಇಂದು (ಆಗಸ್ಟ್ 02) ವಿಚಾರಣೆ ಹಾಜರಾಗಿದ್ದರು. ವಿಚಾರಣೆ ಬಳಿಕ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ‘ಹಕ್ಕುಚ್ಯುತಿ ಪ್ರಕರಣದಲ್ಲಿ ನಮ್ಮ ತಪ್ಪಿಲ್ಲ, ಈ ಪ್ರಕರಣದಲ್ಲಿ ಕಾಂಪ್ರಮೈಸ್ ಆಗುವುದೇ ಇಲ್ಲ, ನ್ಯಾಯಾಲಯದ ಮೂಲಕ ಹೋರಾಟ ಮಾಡಿಯೇ ತೀರುತ್ತೇನೆ’ ಎಂದಿದ್ದಾರೆ. ‘ಬ್ಯಾಚುಲರ್ಸ್ ಪಾರ್ಟಿ’ ಸಿನಿಮಾದಲ್ಲಿ ಬಳಸಲಾಗಿರುವ ಎರಡು ಹಳೆಯ ಹಾಡುಗಳ ಮೇಲೆ ಎಂಆರ್​ಟಿ ಆಡಿಯೋ ಸಂಸ್ಥೆ ದೂರು ದಾಖಲಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ