AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wayanad Landslide: ವಯನಾಡಿನಲ್ಲಿ ಕಾಂಗ್ರೆಸ್​ನಿಂದ 100ಕ್ಕೂ ಹೆಚ್ಚು ಮನೆಗಳ ನಿರ್ಮಾಣ; ರಾಹುಲ್ ಗಾಂಧಿ ಭರವಸೆ

Wayanad Landslide: ವಯನಾಡಿನಲ್ಲಿ ಕಾಂಗ್ರೆಸ್​ನಿಂದ 100ಕ್ಕೂ ಹೆಚ್ಚು ಮನೆಗಳ ನಿರ್ಮಾಣ; ರಾಹುಲ್ ಗಾಂಧಿ ಭರವಸೆ

ಸುಷ್ಮಾ ಚಕ್ರೆ
|

Updated on: Aug 02, 2024 | 5:35 PM

Share

ರಾಹುಲ್ ಗಾಂಧಿ ನಿನ್ನೆಯಷ್ಟೇ ವಯನಾಡಿಗೆ ತೆರಳಿ ಭೂಕುಸಿತ ಉಂಟಾದ ಸ್ಥಳಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಸಂತ್ರಸ್ತರ ಕುಟುಂಬಸ್ಥರ ಜೊತೆ ಮಾತನಾಡಿದ್ದರು. ವಯನಾಡಿನಲ್ಲುಂಟಾಗಿರುವ ವಿನಾಶವನ್ನು ನೋಡಿ ಆಘಾತಕ್ಕೊಳಗಾಗಿರುವ ರಾಹುಲ್ ಗಾಂಧಿ ಕಾಂಗ್ರೆಸ್​ನಿಂದ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದ್ದಾರೆ.

ವಯನಾಡು: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತವನ್ನು ‘ಭಯಾನಕ ದುರಂತ’ ಎಂದು ಬಣ್ಣಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಕಾಂಗ್ರೆಸ್ ವಯನಾಡಿನಲ್ಲಿ ಸಂತ್ರಸ್ತರಿಗೆ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುತ್ತದೆ ಎಂದು ಭರವಸೆ ನೀಡಿದ್ದಾರೆ. ಈ ವಿಷಯವನ್ನು ದೆಹಲಿಯಲ್ಲಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ಪ್ರಸ್ತಾಪಿಸುವುದಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.

ಗುರುವಾರ ವಯನಾಡ್‌ಗೆ ಆಗಮಿಸಿ ಭೂಕುಸಿತದಿಂದ ಉಂಟಾದ ವಿನಾಶದ ಪ್ರಮಾಣವನ್ನು ನೋಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದನ್ನು “ರಾಷ್ಟ್ರೀಯ ವಿಪತ್ತು” ಎಂದು ಕರೆದಿದ್ದರು. ಇದನ್ನು ಎದುರಿಸಲು ತುರ್ತು ಸಮಗ್ರ ಕ್ರಿಯಾ ಯೋಜನೆಗೆ ಒತ್ತಾಯಿಸಿದ್ದರು. ನಮ್ಮ ತಕ್ಷಣದ ಗಮನವು ರಕ್ಷಣೆ, ಪರಿಹಾರ ಮತ್ತು ಪುನರ್ವಸತಿ ಪ್ರಯತ್ನಗಳ ಮೇಲೆ ಕೇಂದ್ರೀಕೃತವಾಗಿದೆ. ವಯನಾಡಿನಲ್ಲಿ 100ಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ