ಗಿಲ್ಲಿ ವಿರುದ್ಧ ತಿರುಗಿ ಬಿದ್ದ ರಕ್ಷಿತಾ ಶೆಟ್ಟಿ: ಈಗ ಬದಲಾಯ್ತು ಬಿಗ್ ಬಾಸ್ ಆಟ

Updated on: Nov 24, 2025 | 3:52 PM

ಇಷ್ಟು ದಿನ ಗಿಲ್ಲಿ ನಟ ಹಾಗೂ ರಕ್ಷಿತಾ ಶೆಟ್ಟಿ ಆಪ್ತರಾಗಿದ್ದರು. ರಕ್ಷಿತಾ ಅವರನ್ನು ನಮ್ಮ ವಂಶದ ಕುಡಿ ಅಂತ ಗಿಲ್ಲಿ ಹೇಳುತ್ತಿದ್ದರು. ಆದರೆ ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಸಂಬಂಧಗಳು ವರ್ಕೌಟ್ ಆಗಲ್ಲ. ದಿನ ಕಳೆದಂತೆಲ್ಲ ಸ್ನೇಹ-ಸಂಬಂಧ ಬದಲಾಗುತ್ತದೆ. ಈಗ ಗಿಲ್ಲಿ ವಿರುದ್ಧವೇ ರಕ್ಷಿತಾ ತಿರುಗಿ ಬಿದ್ದಿದ್ದಾರೆ.

ಇಷ್ಟು ದಿನಗಳ ಕಾಲ ಗಿಲ್ಲಿ ನಟ ಮತ್ತು ರಕ್ಷಿತಾ ಶೆಟ್ಟಿ (Rakshita Shetty) ಅವರು ಆಪ್ತರಾಗಿದ್ದರು. ರಕ್ಷಿತಾ ಅವರನ್ನು ‘ನಮ್ಮ ವಂಶದ ಕುಡಿ’ ಎಂದು ಗಿಲ್ಲಿ ನಟ ಹೇಳಿದ್ದರು. ಆದರೆ ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಇಂಥ ಸಂಬಂಧಗಳೆಲ್ಲ ವರ್ಕೌಟ್ ಆಗಲ್ಲ. ದಿನ ಕಳೆದಂತೆಲ್ಲ ಸ್ಪರ್ಧಿಗಳ ಸ್ನೇಹ-ಸಂಬಂಧ ಬದಲಾಗುತ್ತದೆ. ಈಗ ಗಿಲ್ಲಿ ವಿರುದ್ಧವೇ ರಕ್ಷಿತಾ ಶೆಟ್ಟಿ ತಿರುಗಿ ಬಿದ್ದಿದ್ದಾರೆ. ವಿವಿಧ ಕಾರಣಗಳನ್ನು ನೀಡಿ ಗಿಲ್ಲಿ ಅವರನ್ನು ನಾಮಿನೇಟ್ ಮಾಡಲಾಗುತ್ತಿದೆ. ಗಿಲ್ಲಿ ಅವರ ನಡೆ-ನುಡಿಯನ್ನು ಕೆಲವು ಸ್ಪರ್ಧಿಗಳು ವಿರೋಧಿಸುತ್ತಿದ್ದಾರೆ. ಗಿಲ್ಲಿ ಸ್ಟ್ರಾಂಗ್ ಸ್ಪರ್ಧಿ ಎಂಬುದು ಎಲ್ಲರಿಗೂ ಗೊತ್ತು. ಪ್ರೇಕ್ಷಕರಲ್ಲಿಯೂ ಈ ಅಭಿಪ್ರಾಯ ಇದೆ. ಗಿಲ್ಲಿಯೇ ಕಪ್ ಗೆಲ್ಲುವುದು ಎಂದು ವೀಕ್ಷಕರು ಕಮೆಂಟ್ ಮಾಡುತ್ತಿದ್ದಾರೆ. ನವೆಂಬರ್ 24ರ ಎಪಿಸೋಡ್ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ. ಗಿಲ್ಲಿ ನಟ (Gilli Nata) ಅವರನ್ನು ಯಾರೆಲ್ಲ ನಾಮಿನೇಟ್ ಮಾಡಿದ್ದಾರೆ ಎಂಬುದನ್ನು ತಿಳಿಯಲು ಪೂರ್ತಿ ಸಂಚಿಕೆ ನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More