AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಎಂ ಪಟ್ಟಕ್ಕೆ ಕಣ್ಣಿಟ್ಟಿರೋ ಡಿ.ಕೆ. ಶಿವಕುಮಾರ್​​ ಬಗ್ಗೆ ರಮೇಶ್​ ಜಾರಕಿಹೊಳಿ ಹೊಸ ಬಾಂಬ್​​

ಸಿಎಂ ಪಟ್ಟಕ್ಕೆ ಕಣ್ಣಿಟ್ಟಿರೋ ಡಿ.ಕೆ. ಶಿವಕುಮಾರ್​​ ಬಗ್ಗೆ ರಮೇಶ್​ ಜಾರಕಿಹೊಳಿ ಹೊಸ ಬಾಂಬ್​​

Sahadev Mane
| Edited By: |

Updated on: Nov 24, 2025 | 2:00 PM

Share

ಹೆಚ್​​.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣರಲ್ಲ, ಬದಲಿಗೆ ಡಿಕೆ ಶಿವಕುಮಾರ್ ಮೂಲ ಕಾರಣ ಎಂದು ರಮೇಶ್​ ಜಾರಕಿಹೊಳಿ ಹೇಳಿದ್ದಾರೆ. ಸರ್ಕಾರವನ್ನು ಕೆಡವಲು ನಾನೇ ಪ್ರಮುಖ ಸೂತ್ರಧಾರನಾಗಿದ್ದೆ ಎಂದು ಸ್ಪಷ್ಟಪಡಿಸಿರುವ ಅವರು, ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ದೇವೇಗೌಡರ ಹೇಳಿಕೆಯನ್ನು ನಿರಾಕರಿಸಿದ್ದಾರೆ.

ಬೆಳಗಾವಿ, ನವೆಂಬರ್​​ 24: ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಹೆಚ್​​.ಡಿ. ದೇವೇಗೌಡರ ಆರೋಪವನ್ನು ಮಾಜಿ ಸಚಿವ ರಮೇಶ್​ ಜಾರಕಿಹೊಳಿ ನಿರಾಕರಿಸಿದ್ದಾರೆ. ಸಮ್ಮಿಶ್ರ ಸರ್ಕಾರ ಬೀಳಲು ಮೂಲ ಕಾರಣ ಡಿ.ಕೆ ಶಿವಕುಮಾರ್ ಎಂದಿರುವ ಜಾರಕಿಹೊಳಿ, ಆಪರೇಷನ್​​ ಕಮಲದ ಸೂತ್ರಧಾರ ನಾನೇ ಆಗಿದ್ದೆ. ಸಿದ್ದರಾಮಯ್ಯನವರಿಗೆ ಈ ವಿಚಾರ ಯಾವುದೇ ರೀತಿ ಸಂಬಂಧವಿರಲಿಲ್ಲ. ಡಿ.ಕೆ. ಶಿವಕುಮಾರ್ ಅವರ ಬೆಳಗಾವಿ ರಾಜಕೀಯ ಹಸ್ತಕ್ಷೇಪವೇ ಸರ್ಕಾರ ಪತನಕ್ಕೆ ಕಾರಣ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.