AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ಯ ಮುಚ್ಚಿಡಲು ಆಗಲ್ಲ: ಮೈತ್ರಿ ಸರ್ಕಾರ ಪತನದ ಗುಟ್ಟು ಬಿಚ್ಚಿಟ್ಟ ಹೆಚ್​ಡಿ ದೇವೇಗೌಡ

ಸತ್ಯ ಮುಚ್ಚಿಡಲು ಆಗಲ್ಲ: ಮೈತ್ರಿ ಸರ್ಕಾರ ಪತನದ ಗುಟ್ಟು ಬಿಚ್ಚಿಟ್ಟ ಹೆಚ್​ಡಿ ದೇವೇಗೌಡ

Anil Kalkere
| Edited By: |

Updated on: Nov 21, 2025 | 10:49 PM

Share

ಹೆಚ್​​ಡಿ. ದೇವೇಗೌಡ ಮೈತ್ರಿ ಸರ್ಕಾರ ಪತನದ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದು, ಸತ್ಯಕ್ಕೆ ಬೆಲೆ ಇದೆ. ಮುಚ್ಚಿಡಲು ಸಾಧ್ಯವಿಲ್ಲ ಎಂದಿದ್ದಾರೆ. ಹೆಚ್​.ಡಿ. ಕುಮಾರಸ್ವಾಮಿಯವರ ಜನಪರ ಕಾರ್ಯಕ್ರಮಗಳನ್ನು ಸ್ಮರಿಸಿದ ಅವರು, ಎರಡು ಬಾರಿ ಮುಖ್ಯಮಂತ್ರಿಯಾದ ಅನುಭವವುಳ್ಳ ಅವರ ನಾಯಕತ್ವದಲ್ಲಿ ಜೆಡಿಎಸ್ ಮತ್ತೆ ತಲೆ ಎತ್ತಿ ನಿಲ್ಲಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ನವೆಂಬರ್​ 21: ಈಗ ಸಿಎಂ ಆಗಿದ್ದಾರಲ್ಲಾ ಅವರೇ ಅಂದು ನಮ್ಮ ಸರ್ಕಾರ ತೆಗೆದಿದ್ದು ಎಂದು ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ವರಿಷ್ಠ ಹೆಚ್‌ಡಿ ದೇವೇಗೌಡ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 18 ಶಾಸಕರನ್ನು ದೆಹಲಿಗೆ ಕಳುಹಿಸಿದ್ರು, ಸತ್ಯ ಮುಚ್ಚಿಡಲು ಆಗಲ್ಲ. ದೈವದ ಅನುಗ್ರಹ ಇರುತ್ತೆ, ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.