ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಂಚ ಪಡೆಯುವ ವೈದ್ಯೆ

ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಂಚ ಪಡೆಯುವ ವೈದ್ಯೆ

TV9 Web
| Updated By: Rakesh Nayak Manchi

Updated on: Nov 26, 2022 | 3:31 PM

ರಾಮನಗರ ತಾಲ್ಲೂಕಿನ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿ ಡಿಸ್ಚಾರ್ಜ್ ಮಾಡಲು 6 ಸಾವಿರ ಹಣಕ್ಕೆ ಪ್ರಸೂತಿ ತಜ್ಞೆ ಡಾ ಶಶಿಕಲಾ ಬೇಡಿಕೆ ಇಡುವ ವಿಡಿಯೋ ಇಲ್ಲಿದೆ ನೋಡಿ.

ರಾಮನಗರ: ರಾಮನಗರ ತಾಲ್ಲೂಕಿನ ಬಿಡದಿ ಪ್ರಾಥಮಿಕ ಆರೋಗ್ಯ ಕೇಂದ್ರ (Bidadi Primary Health Centre)ದಲ್ಲಿ ಬಾಣಂತಿ ಡಿಸ್ಚಾರ್ಜ್ ಮಾಡಲು 6 ಸಾವಿರ ಹಣಕ್ಕೆ ಪ್ರಸೂತಿ ತಜ್ಞೆ ಡಾ ಶಶಿಕಲಾ ಬೇಡಿಕೆ ಇಡುತ್ತಿದ್ದಾರೆ. ಬಾಣಂತಿ ಡಿಸ್ಚಾರ್ಜ್ ಮಾಡಲು 6 ಸಾವಿರ ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ. ಒಂದು ವಾರದ ಹಿಂದೆ ಬಾಣಂತಿ ರೂಪ ಎಂಬುವರಿಗೆ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಆಗಿತ್ತು. ಇವರನ್ನು ಡಿಸ್ಚಾರ್ಜ್ ಮಾಡಲು ರೂಪಾ ಅವರ ಪತಿಗೆ ಲಂಚ ನೀಡುವಂತೆ ವೈದ್ಯೆ ಬೇಡಿಕೆ ಇಟ್ಟಿದ್ದಾರೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ