ಸೋಮನಹಳ್ಳಿ ಟೋಲ್ಗೆ ವಿರೋಧ: ಸರ್ವಿಸ್ ರಸ್ತೆ ನಿರ್ಮಿಸುವವರೆಗೂ ಹೋರಾಟ ನಿಲ್ಲಲ್ಲವೆಂದ ರೈತರು
ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಹೆಚ್ಚಿನ ಟೋಲ್ ದರ ಮತ್ತು ಸರ್ವಿಸ್ ರಸ್ತೆ ಅಭಾವದ ವಿರುದ್ಧ ರೈತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ. NHAI ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು, ಸರ್ವಿಸ್ ರಸ್ತೆ ನಿರ್ಮಾಣವಾಗುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದ್ದಾರೆ. ಈ ಪ್ರತಿಭಟನೆಯಲ್ಲಿ ರಾಜಕಾರಣಿಗಳು ಮತ್ತು ಸಾರ್ವಜನಿಕರು ಭಾಗವಹಿಸಿದ್ದಾರೆ.
ರಾಮನಗರ, ಮೇ 21: ರಾಜ್ಯದಲ್ಲಿ ಮೊತ್ತೊಂದು ಟೋಲ್ (Somana Halli Toll) ವಿರುದ್ಧ ರೈತರು ಮತ್ತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಕ್ಸ್ಪ್ರೆಸ್ ಹೈವೇ ನಂತರ ಬೆಂಗಳೂರು ದಕ್ಷಿಣ ತಾಲೂಕಿನ ಸೋಮನಹಳ್ಳಿ ಟೋಲ್ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಸರ್ವಿಸ್ ರಸ್ತೆ ನೀಡದೆ ದುಬಾರಿ ಟೋಲ್ ಸಂಗ್ರಹಿಸುತ್ತಿರುವ NHAI ವಿರುದ್ಧ ರೈತ ಸಂಘ ಸೇರಿ ವಿವಿಧ ಸಂಘಟನೆಗಳಿಂದ ಪ್ರತಿಭಟಿಸಿದರು. ಸರ್ವಿಸ್ ರಸ್ತೆ ನಿರ್ಮಿಸುವವರೆಗೂ ಹೋರಾಟ ನಿಲ್ಲಲ್ಲವೆಂದು ಎಚ್ಚರಿಕೆ ನೀಡಿದ್ದಾರೆ. ರೈತರ ಪ್ರತಿಭಟನೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಮತ್ತು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಭಾಗಿ ಆಗಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.