ಮಳೆ ಸುರಿಯುವುದು ನಿಂತ ಬಳಿಕ ಜನರ ಸಮಸ್ಯೆ ಆಲಿಸಲು ಹೋದ ಶಾಸಕಿ ಅನಿತಾ ಕುಮಾರಸ್ವಾಮಿಯವರಿಗೆ ಸಂತ್ರಸ್ತರ ಕೋಪ ಎದುರಿಸಬೇಕಾಯಿತು!
ಮತ್ತೊಂದು ಪ್ರದೇಶದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಿದ ಮೌಲ್ವಿಯೊಬ್ಬರು ಕೇಳಿದ ಪ್ರಶ್ನೆಗಳಿಗೆ ಶಾಸಕಿ ಸಮಂಜಸ ಉತ್ತರಗಳನ್ನು ನೀಡಲಿಲ್ಲ. ಅವರ ಪರ ಅಧಿಕಾರಿಯೊಬ್ಬರು ಮಾತಾಡಿದರು.
ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಮಳೆಯಿಂದ ಹಾನಿಗೊಳಗಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದರು. ಆದರೆ ಹೋದೆಡೆಯೆಲ್ಲ ಅವರಿಗೆ ಜನರ ಅಸಮಾಧಾನ, ಕೋಪ ಮತ್ತು ಹತಾಷೆ ಎದುರಿಸಬೇಕಾಯಿತು. ಒಬ್ಬ ಹಿರಿಯ ವ್ಯಕ್ತಿ ಬರೀ ನೀವು ಹೇಳುವುದನ್ನೇ ನಾವು ಕೇಳಬೇಕು ಅಂತ ನಿರೀಕ್ಷಿಸುತ್ತೀರಿ, ನಮ್ಮ ಸಮಸ್ಯೆಯನ್ನು ಕೇಳುವುದೇ ಇಲ್ಲ ಅಂತ ರೇಗಾಡಿದರು. ಮತ್ತೊಂದು ಪ್ರದೇಶದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತಾಡಿದ ಮೌಲ್ವಿಯೊಬ್ಬರು ಕೇಳಿದ ಪ್ರಶ್ನೆಗಳಿಗೆ ಶಾಸಕಿ ಸಮಂಜಸ ಉತ್ತರಗಳನ್ನು ನೀಡಲಿಲ್ಲ. ಅವರ ಪರ ಅಧಿಕಾರಿಯೊಬ್ಬರು ಮಾತಾಡಿದರು.
Latest Videos