Video: ಯುವಕನ ಸಮಯ ಪ್ರಜ್ಞೆ: ಅದೃಷ್ಟವಶಾತ್ ಅಪಾಯದಿಂದ ಪಾರಾದ 6 ತಿಂಗಳ ಮಗು

| Updated By: ಗಂಗಾಧರ​ ಬ. ಸಾಬೋಜಿ

Updated on: Sep 27, 2023 | 8:14 PM

Ramanagara News: ಯುವಕನ ಸಮಯ ಪ್ರಜ್ಞೆಯಿಂದ 6 ತಿಂಗಳ ಮಗುವಿನ ಪ್ರಾಣ ಉಳಿದಿರುವಂತಹ ಘಟನೆ ರಾಮನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ತಂದೆಯಿಂದ ಮಿಸ್ ಆಗಿ ಮಗು ಕೆಳಗೆ ಬೀಳುತ್ತಿದ್ದು, ಮಕ್ಕದಲ್ಲೆ ತೆರಳಿತ್ತಿದ್ದ ಯುವಕನಿಂದ ಮಗುವಿನ ರಕ್ಷಣೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ಮಗುವಿನ ರಕ್ಷಣೆ ದೃಶ್ಯ ಸೆರೆ ಆಗಿದೆ.

ರಾಮನಗರ, ಸೆಪ್ಟೆಂಬರ್​​ 27: ಯುವಕನ ಸಮಯ ಪ್ರಜ್ಞೆಯಿಂದ 6 ತಿಂಗಳ ಮಗುವಿನ (baby) ಪ್ರಾಣ ಉಳಿದಿರುವಂತಹ ಘಟನೆ ರಾಮನಗರದ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದ ಬಳಿ ನಡೆದಿದೆ. ಕಾರು ನಿಲ್ಲಿಸಿ  ದಂಪತಿ ಕೆಳಗೆ ಇಳಿಯುತ್ತಿದ್ದಾರೆ. ಮೊದಲು ಮಗು ಎತ್ತಿಕೊಂಡು ಪತಿ ಕಾರಿನಿಂದ ಇಳಿದಿದ್ದು, ಈ ವೇಳೆ ಪತ್ನಿ ಇಳಿಯುವಾಗ ಹ್ಯಾಂಡ್ ಬ್ರೇಕ್ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ ಕಾರು ಮುಂದಕ್ಕೆ ಚಲಿಸಿದೆ. ಇದನ್ನು ಗಮನಿಸಿದ ಪತಿ ಮತ್ತೆ ಕಾರು ಹತ್ತಲು ಯತ್ನಿಸಿದ್ದಾರೆ. ಈ ವೇಳೆ ಪತಿಯಿಂದ ಮಿಸ್ ಆಗಿ ಮಗು ಕೆಳಗೆ ಬೀಳುತ್ತಿದ್ದು, ಮಕ್ಕದಲ್ಲೆ ತೆರಳಿತ್ತಿದ್ದ ಯುವಕನಿಂದ ಮಗುವಿನ ರಕ್ಷಣೆ ಮಾಡಲಾಗಿದೆ. ಸಿಸಿಟಿವಿಯಲ್ಲಿ ಮಗುವಿನ ರಕ್ಷಣೆ ದೃಶ್ಯ ಸೆರೆ ಆಗಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Sep 27, 2023 08:13 PM