ಸರಿಗಮಪ ವೇದಿಕೆ ಮೇಲೆ 28 ವರ್ಷಗಳ ಬಳಿಕ ತಮ್ಮದೇ ಚಿತ್ರದ ಹಾಡು ಕೇಳಿ ರಮೇಶ್ ಅರವಿಂದ್​ಗೆ ಪುಳಕ

|

Updated on: Mar 08, 2025 | 8:31 AM

ರಮೇಶ್ ಅರವಿಂದ್ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈಗ ಅವರ ಸಿನಿಮಾ ಹಾಡುಗಳನ್ನು ‘ಸರಿಗಮಪ’ ವೇದಿಕೆ ಮೇಲೆ ಕೇಳಲು ಅವಕಾಶ ಸಿಕ್ಕಿದೆ. ಈ ವಿಚಾರದಲ್ಲಿ ಅವರಿಗೆ ಸಾಕಷ್ಟು ಖುಷಿ ಇದೆ. ಅದನ್ನು ಅವರು ಎಲ್ಲರ ಎದುರು ಹೇಳಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ರಮೇಶ್ ಅರವಿಂದ್ ಅವರು ‘ಸರಿಗಮಪ’ ವೇದಿಕೆ ಏರಿದ್ದಾರೆ. ಅವರದ್ದೇ ನಟನೆಯ ಸಿನಿಮಾಗಳ ಹಾಡನ್ನು ಎಲ್ಲರೂ ಹಾಡಿದರು. ಇದನ್ನು ಕೇಳಿ ಅವರು ಖುಷಿಪಟ್ಟರು. ಅದರಲ್ಲೂ ‘ಅಮೃತವರ್ಷಿಣಿ’ ಚಿತ್ರದ ‘ಈ ಸುಂದರ..’  ಹಾಡನ್ನು ಕೇಳಿ ಅವರು ಥ್ರಿಲ್ ಆದರು. ಹಾಡನ್ನು ಹಾಡಿದ ಸುಧೀಕ್ಷಾ ಅವರನ್ನು ಬಾಯ್ತುಂಬ ಅವರು ಹೊಗಳಿದ್ದಾರೆ. ಶನಿವಾರ ಹಾಗೂ ಭಾನುವಾರ ಸಂಜೆ 7.30ಕ್ಕೆ ‘ಸರಿಗಮಪ’ ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.