ಚಿತ್ರರಂಗವನ್ನು ಆರಿಸಿಕೊಳ್ಳಲು ತಾವು ಕೊಟ್ಟಿದ್ದ ಕಾರಣ ನೆನೆದ ರಮೇಶ್ ಅರವಿಂದ್, ಕೊನೆಗೆ ಅದೇ ಸತ್ಯವಾಯ್ತು
Ramesh Arvind: ಎಂಜಿನಿಯರಿಂಗ್ ಪದವಿ ಮುಗಿಸಿ ಚಿತ್ರರಂಗವನ್ನು ಆಯ್ಕೆ ಮಾಡಿಕೊಂಡಾಗ ಕೊಟ್ಟಿದ್ದ ಕಾರಣವನ್ನು ರಮೇಶ್ ಅರವಿಂದ್ ನೆನಪು ಮಾಡಿಕೊಂಡಿದ್ದಾರೆ.
ರಮೇಶ್ ಅರವಿಂದ್ (Ramesh Arvind) ನಟನೆಯ ಶಿವಾಜಿ ಸೂರತ್ಕಲ್ 2 (Shiva Surathkal 2) ಸಿನಿಮಾ ಯಶಸ್ವಿ ಎನಿಸಿಕೊಂಡಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಊಟ ಬಡಿಸಿ ಖುಷಿ ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ರಮೇಶ್, ನನ್ನ ಮೊದಲ ಸಿನಿಮಾವನ್ನು ನನ್ನ ಎಂಜಿನಿಯರಿಂಗ್ ಗೆಳೆಯರು ಯೂನಿಫಾರಂ ಹಾಕಿಕೊಂಡು ನೋಡಿದ್ದರು. ಅದೇ ಗೆಳೆಯರು ಈಗ ಶಿವಾಜಿ ಸೂರತ್ಕಲ್ ಸಹ ನೋಡಿದ್ದರು. ಅಂದು ಎಂಜಿನಿಯರಿಂಗ್ ಮುಗಿಸಿ ನೌಕರಿಗೆ ಹೋಗದೆ ಚಿತ್ರರಂಗಕ್ಕೆ ಬಂದಾಗ ಅವರು ಯಾಕೆ ಈ ನಿರ್ಧಾರ ಮಾಡುತ್ತಿರುವೆ ಎಂದು ಕೇಳಿದ್ದರು. ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ನಾನು ಮಷಿನ್ ಶಬ್ದಕ್ಕಿಂತಲೂ ಚಪ್ಪಾಳೆ ಶಬ್ದವೇ ಹೆಚ್ಚು ಹಿತ ಎಂದಿದ್ದೆ. ನನ್ನ ಆಯ್ಕ ಸರಿಯಾಯಿತು ಎಂದಿದ್ದಾರೆ. ಇನ್ನೂ ಹಲವು ವಿಷಯಗಳನ್ನು ರಮೇಶ್ ಅರವಿಂದ್ ಮಾತನಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 20, 2023 10:52 PM