ಡಿಕೆ ಶಿವಕುಮಾರ ವಿರುದ್ಧ ಮಾಡಿರುವ ಆರೋಪಗಳ ಸಿಡಿಗಳನ್ನು ಅಮಿತ್ ಶಾಗೆ ತಲುಪಿಸಿ ಸಿಬಿಐ ತನಿಖೆಗೆ ಮನವಿ ಮಾಡಿದ ರಮೇಶ್ ಜಾರಕಿಹೊಳಿ
ಗೃಹ ಮಂತ್ರಿಗಳನ್ನು ಭೇಟಿಯಾಗಿ ಹೊರ ಬಂದ ಬಳಿಕ ರಮೇಶ್ ತಮ್ಮ ದುಂಬಾಲು ಬಿದ್ದಿದ್ದ ಮಾಧ್ಯಮದವರ ಜೊತೆ ಮಾತಾಡುವ ಗೋಜಿಗೆ ಹೋಗದೆ ಮೌನವಾಗಿ ನಡೆದುಹೋದರು.
ದೆಹಲಿ: ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ (Ramesh Jarkiholi) ಅವರು ಶುಕ್ರವಾರ ನವದೆಹಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಭೇಟಿಯಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಅವರು ಮಾಡಿರುವ ಆರೋಪಗಳ ಸಿಡಿಗಳನ್ನು ನೀಡಿದರಲ್ಲದೆ ಸಿಬಿಐಗೆ ಪ್ರಕರಣವನ್ನು ವಹಿಸಬೇಕೆಂದು ಮನವಿ ಮಾಡಿದರು. ಗೃಹ ಮಂತ್ರಿಗಳನ್ನು ಭೇಟಿಯಾಗಿ ಹೊರ ಬಂದ ಬಳಿಕ ರಮೇಶ್ ತಮ್ಮ ದುಂಬಾಲು ಬಿದ್ದಿದ್ದ ಮಾಧ್ಯಮದವರ ಜೊತೆ ಮಾತಾಡುವ ಗೋಜಿಗೆ ಹೋಗದೆ ಮೌನವಾಗಿ ನಡೆದುಹೋದರು. ಕನ್ನಡದ ಕೆಲ ಪತ್ರಕರ್ತರು ಮಾತಾಡುವಂತೆ ಆಗ್ರಹಿಸಿದರೂ ಗೋಕಾಕ ಶಾಸಕ ತುಟಿ ಬಿಚ್ಚಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 03, 2023 01:32 PM