Loading video

2028ರ ವಿಧಾನಸಭಾ ಚುನಾವಣೆ ವೇಳೆಗೆ ಬಂಡಾಯ ಏಳುತ್ತೇನೆಂದ ರಮೇಶ್ ಜಾರಕಿಹೊಳಿ: ಕಾರಣ ಇಲ್ಲಿದೆ

| Updated By: Ganapathi Sharma

Updated on: Nov 30, 2024 | 10:47 AM

ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗದಿದ್ದರೆ 2028ರ ವಿಧಾನಸಭೆ ವೇಳೆ ಬಂಡಾಯ ಏಳುವುದಾಗಿಯೂ, ಆಗ ಯಾವುದೇ ಸರ್ಕಾರ ಇದ್ದರೂ ಪತನಗೊಳಿಸುವುದಾಗಿಯೂ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಮತ್ತೊಂದೆಡೆ, ಮತ್ತೆ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಅವರ ಮಾತಿನ ವಿಡಿಯೋ ಇಲ್ಲಿದೆ.

ಬೆಳಗಾವಿ, ನವೆಂಬರ್ 30: ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು. ಇಲ್ಲವಾದರೆ ನಾನು ಬಂಡಾಯ ಏಳುತ್ತೇನೆ. 2028ರ ವಿಧಾನಸಭಾ ಚುನಾವಣೆ ವೇಳೆ ನಾನು ಸುಮ್ಮನೆ ಕೂರುವುದಿಲ್ಲ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ಬೆಳಗಾವಿ ಜಿಲ್ಲೆ ಗೋಕಾಕ್​​​ನಲ್ಲಿ ಮಾತನಾಡಿದ ಅವರು, 74 ಪರ್ಸೆಂಟ್​ ಇರುವ ಹಿಂದುಳಿದ ಸಮುದಾಯಕ್ಕೆ ನ್ಯಾಯ ಸಿಗಬೇಕು. ಇಲ್ಲವಾದರೆ ನಾನು ಬಂಡಾಯ ಏಳುತ್ತೇನೆ. ನಮ್ಮ ಸರ್ಕಾರವೇ ಇರಲಿ, ಬೇರೆ ಸರ್ಕಾರವೇ ಇರಲಿ ಬೀಳಿಸುತ್ತೇನೆ. 2028ಕ್ಕೆ ನಾನು ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಂದರು.

ಈವರೆಗೂ ನಮಗೆ ಎಲ್ಲರೂ ಮೋಸ ಮಾಡಿದ್ದಾರೆ. ಕುರುಬರು, ಉಪ್ಪಾರ, ಸುಣಗಾರ ಸಮಾಜದವರು ಅಧಿಕಾರಕ್ಕೆ ಬರಬೇಕು. ಒಬಿಸಿಗಿಂತ ಎಸ್​ಟಿಗೆ ಹೆಚ್ಚಿನ ಪ್ರಮಾಣ ಬರಬೇಕು ಎಂಬುದು ನನ್ನ ಬೇಡಿಕೆ. ನನ್ನ ಜೊತೆ ನೀವು ಕೈ ಜೋಡಿಸಿ ಎಂದು ಸ್ವಾಮೀಜಿ ಅವರಿಗೆ ಕೇಳಿದ್ದೇನೆ. ನಾನೀಗ ಬಿಜೆಪಿಯಲ್ಲಿದ್ದೇನೆ , ಅನಿವಾರ್ಯವಾಗಿ ಬಿಜೆಪಿ ಹೋಗಿದ್ದೇನೆ. ಕಾಂಗ್ರೆಸ್​ನಲ್ಲಿ 5 ಬಾರಿ, ಬಿಜೆಪಿಯಲ್ಲಿ 2 ಬಾರಿ ಶಾಸಕನಾಗಿದ್ದೇನೆ. ನನಗೆ ಕಾಂಗ್ರೆಸ್ ಪಕ್ಷ ಯಾವುದೇ ರೀತಿಯ​​​​ ಕೆಟ್ಟದ್ದನ್ನು ಮಾಡಿರಲಿಲ್ಲ. ಒಬ್ಬ ವ್ಯಕ್ತಿಯಿಂದಾಗಿ ಕಾಂಗ್ರೆಸ್ ಪಕ್ಷ ಬಿಟ್ಟೆ ಎಂದು ರಮೇಶ್​ ಜಾರಕಿಹೊಳಿ ಹೇಳಿದರು.

ಎಲ್ಲರೂ ಸೇರಿ ಷಡ್ಯಂತ್ರ ಮಾಡಿದ್ದರಿಂದ ಕಾಂಗ್ರೆಸ್​ನಿಂದ ಹೊರಬಂದೆ. ಬಿಜೆಪಿಯಲ್ಲಿ ಬೆಳೆಯುತ್ತಿದ್ದಂತೆ ಅಲ್ಲೂ ಷಡ್ಯಂತ್ರ ಮಾಡಿದರು. ಅದಕ್ಕೂ ನಾನು ಹೆದರಲಿಲ್ಲ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ