Karnataka Assembly Polls; ರಮೇಶ್ ಜಾರಕಿಹೊಳಿ 50,000ಕ್ಕಿಂತ ಅಧಿಕ ವೋಟುಗಳಿಂದ ಗೆಲ್ಲುತ್ತಾರೆ: ಲಖನ್ ಜಾರಕಿಹೊಳಿ

| Updated By: Digi Tech Desk

Updated on: May 11, 2023 | 5:12 PM

ರಮೇಶ್ ಜಾರಕಿಹೊಳಿ ಇಡೀ ಬೆಳಗಾವಿಯಲ್ಲಿ ಅತ್ಯಂತ ಜನಪ್ರಿಯ ಮತ್ತು ಜನಾನುರಾಗಿ ವ್ಯಕ್ತಿಯೆನಿಸಿಕೊಂಡಿದ್ದಾರೆ ಎಂದು ಲಖನ್ ಜಾರಕಿಹೊಳಿ ಹೇಳಿದರು,

ಬೆಳಗಾವಿ: ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ (Ramesh Jarkiholi) ಕನಿಷ್ಠ 50,000 ಮತಗಳ ಅಂತರದಿಂದ ಜಯಗಳಿಸಲಿದ್ದಾರೆ ಎಂದು ಅವರ ಸಹೋದರ ಮತ್ತು ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ (Lakhan Jarkiholi) ಹೇಳಿದ್ದಾರೆ. ಗೋಕಾಕ್ ನಲ್ಲಿ (Gokak) ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಲಖನ್, ರಮೇಶ್ ಜಾರಕಿಹೊಳಿ ಕೇವಲ ಗೋಕಾಕನಲ್ಲಿ ಮಾತ್ರ ಅಲ್ಲ, ಇಡೀ ಬೆಳಗಾವಿಯಲ್ಲಿ ಅತ್ಯಂತ ಜನಪ್ರಿಯ ಮತ್ತು ಜನಾನುರಾಗಿ ವ್ಯಕ್ತಿಯೆನಿಸಿಕೊಂಡಿದ್ದಾರೆ ಎಂದರು. ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರೆಲ್ಲ ಗೋಕಾಕ ಕ್ಷೇತ್ರಕ್ಕೆ ಬಂದಿದ್ದು ನಿಜವಾದರೂ, ರಮೇಶ್ ಅವರ ಪ್ರಭಾವದ ಮೇಲೆ ಅದು ಯಾವುದೇ ಪ್ರಭಾವ ಬೀರಿಲ್ಲ ಎಂದು ಲಖನ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 10, 2023 04:41 PM